ಸ್ಮರಿಸೊ ಮನವೆ ಸಿರಿಲೋಲ ಶ್ರೀ ಕೃಷ್ಣನ ಸ್ಮರಿಸಲೊದಗುವ ಸ್ವಾಮಿ ಶ್ರೀ ವಿಷ್ಣುವಿನ ಪ
ಸ್ಮರಿಸಿ ಕರಿರಾಜ ಸೆರೆಯಿಂದ ಬಿಡಲಿಲ್ಲವೆ ದುರಿತವನು ಗೆದ್ದರುಷಬಡಲಿಲ್ಲವೆ 1
ಪರಿ ಹರಿ ಮಹಿಮೆ ತಿಳಿಯಲಿಲ್ಲವೆ2
ಸ್ಮರಿಸಿ ದ್ರೌಪದಿ ಅಪತ್ತುಗಳಿಲಿಲ್ಲವೆ ಮೊರೆಯಗೇಳಿ ಕೃಷ್ಣ ಸುಳಿಯಲಿಲ್ಲವೆ 3
ಸ್ಮರಿಸಿ ಪಾಂಡವ ಸತ್ವವು ನಡೆಲಿಲ್ಲವೆ ಅರಗಿನ ಮನೆಯೊಳು ಉಳಿಲಿಲ್ಲವೆ 4
ಸ್ಮರಿಸು ಮಹಿಪತಿ ಮನವ ನಿಜಗೊಲಿಲ್ಲವೆ ಗುರು ಚರಣ ಸ್ಮರಿಸಿ ನೆಲೆಗೊಳಲಿಲ್ಲವೆ5
***
ಕಾಖಂಡಕಿ ಶ್ರೀ ಮಹಿಪತಿರಾಯರು
ಸ್ಮರಿಸೊ ಮನವೇ ಹರಿಯ ನರಹರಿಯ ಅರಸಾಗ್ಯಾಳುವ ಸಿರಿಯ ಪ
ಕರಿಯ ಕೇಳಿದ ಮೊರಿಯ ನೀನರಿಯ ಸುರರ ಬಿಡಿಸಿದ ಸರಿಯ ಧರೆಯೊಳಗಿದು ಖರಿಯ ಯುಗಮೊರಿಯ ಹೊರೆವನು ತಾ ಪರೋಪರಿಯ 1
ಸರ್ವದೈವಕೆ ಹಿರಿಯ ಮುರ ಅರಿಯ ಹರ ಹೃದಯದಲಿ ಪರಿಯ ಸ್ಮರಿಸುವದೀ ಪರಿಯ ದುರಿತ ಕರುಣಕಿಲ್ಲೀತನ ಸರಿಯ 2
ಸೆರಗವಿಡಿದು ಹರಿಯ ಪರಿಪರಿಯ ಅರಿಯೋ ನವವಿಧ ಪರಿಯ ಶರಣಾಗತರ ಸಿರಿಯ ಸುರವರ್ಯಾ ತರಳಮಹಿಪತಿ ದೊರೆಯ 3
***