Showing posts with label ಹರಿಗೋವಿಂದ ಗೋಪಾಲ ಮುಕುಂದನೆ ಕರವ ಮುಗಿವೆ shanti. Show all posts
Showing posts with label ಹರಿಗೋವಿಂದ ಗೋಪಾಲ ಮುಕುಂದನೆ ಕರವ ಮುಗಿವೆ shanti. Show all posts

Sunday, 1 August 2021

ಹರಿಗೋವಿಂದ ಗೋಪಾಲ ಮುಕುಂದನೆ ಕರವ ಮುಗಿವೆ ankita shanti

..

kruti by shantibai dasaru ಶಾಂತಿಬಾಯಿ ದಾಸರು


ಹರಿಗೋವಿಂದ ಗೋಪಾಲ ಮುಕುಂದನೆ ಕರವ ಮುಗಿವೆ

ಚರಣಕ್ಕೆರಗುವೆ ಭರದಿ ರಕ್ಷಿಸು ಬಿಡದೇ ಶ್ರೀ ಪ


ಮಾನಿನಿ ದ್ರೌಪದಿ ಮಾನವ ಕಾಯ್ದೆಯೊ

ಹೀನರ ಮದಗರ್ವವನೆಲ್ಲ ಅಳಿದೆಯೊ

ಧ್ಯಾನ ಮಾಡುವ ಸ್ವಾನುಭವಿಗಳ

ಸ್ಥಾನ ಹೃದಯವಾಸ ಶ್ರೀ 1


ಧ್ಯಾನಿಸಿವಂಥಾ ಗಜರಾಜನ ಕಾಯ್ದೆ

ಮಾನಿನಿ ಅಹಲ್ಯೆಯ ಪಾದದೊಳುದ್ಧರಿಸಿದೆ

ದೀನರಕ್ಷಕ ಬಿರುದ ಪೊತ್ತ ವಿ

ಜ್ಞಾನದೊಳಗಿರಿಸೆನ್ನಾ 2


ಶಬರಿಯ ಭಕ್ತಿಗೆ ಮೆಚ್ಚನೀ ಬಂದೆಯೊ

ಬದರಿಯ ಹಣ್ಣನೆ ಸವಿಸವಿ ದುಂಡೆಯೊ

ವಿಭು ಪರಮಾನಂದಾ ಪ್ರಭೆಯೊಳಗಿರಿಸಿದೆ 3


ಸ್ವರ್ಣಕಶ್ಯಪನ ಸೊಕ್ಕಗಿಸಿದೆ ದೇವಾ

ಮನ್ನಿಸಿ ಪಾಂಡವರೈವರ ಸಲಹುವಾ

ಚನ್ನ ಗೋಪಿಯರ ಕೂಡಿ ಮನ್ನಣೆಕ್ರೀಡೆಯ ನಾಡಿ 4

***