Showing posts with label ಇದೀಗ ಭಕುತಿಯು ಮತ್ತಿದೀಗ purandara vittala. Show all posts
Showing posts with label ಇದೀಗ ಭಕುತಿಯು ಮತ್ತಿದೀಗ purandara vittala. Show all posts

Tuesday 3 December 2019

ಇದೀಗ ಭಕುತಿಯು ಮತ್ತಿದೀಗ purandara vittala

ಪುರಂದರದಾಸರು
ರಾಗ ದೇಶಿಕತೋಡಿ ರೂಪಕತಾಳ

ಇದೀಗ ಭಕುತಿಯು ಮ-
ತ್ತಿದೀಗ ಭಕುತಿಯು ||ಪ||
ಮಧುದ್ವಿಷನ ಪದಕಮಲಕೆ
ಮಧುಪನಂತೆ ಮುದದಿ ವಂದಿಪಡೆ ||ಅ||

ಶ್ರೀಕಾಂತಮೂರುತಿ ಬಾಹ್ಯಾಂತರದಿ
ಏಕಾಂತದಿ ನಿನಗಾನಂದ ತುಳುಕಾಡಿ
ಮುಖವಿಕಾಸದಿ ತನುವ ಮರೆತು
ಏಕಭಾವ ಬುದ್ಧಿಲಿ ಕುಣಿವ ||

ದಂಭವ ಸಾರುವುದತ್ತತ್ತ ಜರಿದು
ಕುಂಭಕ ಪೂರಕ ರೇಚಕ ನೀನದು
ಅಂಬುಧೀಶ ಪದಾಂಭುಜ ವೀಕ್ಷಿಸಿ
ಬಿಂಬವ ಕಾಣುವ ಹಂಬಲ ಹಿಡಿವ ||

ಕಂಡವರ ಕಾಲಿಗೆ ಕುಮನುಜರಿಗೆ
ಮಂಡೆಯ ಬಾಗದೆ ಪರೇಶ ಕೊಟ್ಟಷ್ಟು
ಉಂಡು ಸುಜನರ ಕಂಡು ಸುಖಿಸಿ ಪಾ-
ಷಂಡ ಸಂಭಾಷಣೆ ಸೋಕದೆ ಬಾಳುವ ||

ತಪತಾರಿ ಕಂಬುಲಾಂಛನ ಪಿಡಿದು
ಗುಪಿತಮಂತ್ರವ ವರಗುರುಗಳ
ಉಪದೇಶಕ್ರಮ ಮೀರದೆ ಇತರ
ಕಪಟ ಬಿಟ್ಟು ನಲಿದು ಸುಖಿಪ ||

ಸದ್ಭಕ್ತಿ ಸದ್ಧರ್ಮ ಮಾಡುತ ನೋಡುತ
ಸದ್ಗೋಷ್ಠಿ ಸಚ್ಛಾಸ್ತ್ರ ಹೇಳುತ ಕೇಳುತ
ದುಗ್ಧಸಮುದ್ರೇಶ ಪುರಂದರವಿಠಲಗೆ
ಇದ್ದ ಸಂಪದವ ತಪ್ಪದೆ ಒಪ್ಪಿಪ ||
***

pallavi

idIga bhakutiyu mattidIga mukutiyu

anupallavi

madhudviSana pada kamalake madhupanante mudada vandipaDe

caraNam 1

shrIkAnta mUruti bAhyAntaradi EkAntadi ningAnanda tuLukATi
mukhavikAsadi tanuva maredu EkabhAvadi buddili kuNiva

caraNam 2

Dambhava sAruvudatta jaridu kumbhaga pUraka rEcaka nInadu
ambUdhIsha padAmbuja vIkSisi bimbava kANuva hambala hiDiva

caraNam 3

kaNDavara kAlige kumanujarike maNDeya bAgade parEsha koTTaSTu
uNDu sujanara sukhisi pASaNDa sambhASaNa sOkade bALuva

caraNam 4

tapatAri kambulAnchana piDidu gupita mantrava vara gurugaLa
upadEsha krama mIrade itara kapaTa biTTu nalidu sukhipa

caraNam 5

sadbhakti saddharma mADuta nODuta sadgOSTi sacchAstra hELuta kELuta
dugdha samudrEsha purandara viTTalage idda sambatava tappade oppipa
***

ಇದೀಗ ಭಕುತಿಯು ಮತ್ತಿದೀಗ ಮುಕುತಿಯು ಪ.

ಮಧುದ್ವಿಷನ ಪದಕಮಲಕೆಮಧುಪನಂತೆ ಎರಗುತಿಹುದು ಅಪಶ್ರೀಕಾಂತ ಮೂರುತಿ ಬಾಹ್ಯಾಂತರದಿಏಕಾಂತದಿ ನೆನೆದಾನಂದ ತುಳುಕಾಡಿ ||ಮುಖ ವಿಕಾಸದಿ ತನುವ ಮರೆದುವಿಕಳ ಭಾವದಿ ಉಬ್ಬುಬ್ಬಿ ಕುಣಿವುದು 1

ಡಂಭವ ಸಾರುವರತ್ತತ್ತಜಡಿದುಕುಂಭಕ ರೇಚಕ ಪೂರಕವಿಡಿದು ||ಅಂಬುಧಿಶಾಯಿ ಪದಾಂಬುಜ ವೀಕ್ಷಿಸಿಬಿಂಬವ ಕಾಂಬುವ ಹಂಬಲವಿಡಿವುದು 2

ಕಂಡವರ ಕಾಲಿಗೆ ಕುಮನುಜರಿಗೆಮಂಡೆಯ ಬಾಗದೆ ಪರೇಶ ಕೊಟ್ಟಷ್ಟು ||ಉಂಡು ಸಜ್ಜನರ ಕಂಡು ಸುಖಿಸಿ ಪಾಷಂಡ ಸಂಭಾಷಣೆ ಸೋಕದೆ ಬಾಳ್ವುದು 3

ತಪುತಾರ - ಕಂಬುಲಾಂಛನ ಪಿಡಿದುಗುಪಿತ ಮಂತ್ರಗಳೊರೆವ ಗುರುಗ -ಳುಪದೇಶ ಕ್ರಮವ ಮೀರದೆ ಇತರಕಪಟಬಿಟ್ಟು ನಲಿದು ಸುಖಿಪುದು4

ಸದ್ಭಕ್ತಿ ಸದ್ಧರ್ಮ ಮಾಡುತ ನೋಡುತಸದ್ವಿಷ್ಣು ಸಚ್ಛಾಸ್ತ್ರ ಹೇಳುತ ಕೇಳುತ ||ದುಗ್ಧ ಸಮುದ್ರೇಶ ಪುರಂದರವಿಠಲಗೆಇದ್ದ ಸಂಪದವ ತಪ್ಪದೆ ಒಪ್ಪಿಸುವುದು 5
******