Showing posts with label ನರ ಹರಿನಾಮವ ನೀ ನೆನೆದರೆ ಧರಿಯೊಳು ಸಾಲದೇ ಇಹಪರ gurumahipati. Show all posts
Showing posts with label ನರ ಹರಿನಾಮವ ನೀ ನೆನೆದರೆ ಧರಿಯೊಳು ಸಾಲದೇ ಇಹಪರ gurumahipati. Show all posts

Wednesday, 1 September 2021

ನರ ಹರಿನಾಮವ ನೀ ನೆನೆದರೆ ಧರಿಯೊಳು ಸಾಲದೇ ಇಹಪರ ankita gurumahipati

 ಕಾಖಂಡಕಿ ಶ್ರೀ ಕೃಷ್ಣದಾಸರು


ನರ ಹರಿನಾಮವ ನೀ ನೆನೆದರೆ| ಧರಿಯೊಳು ಸಾಲದೇ ಇಹಪರ ದೋರದೆ| ಬರದೇ ಸಾಯಾಸ ಬಡುವರೇ ಪ 


ಆದಿ ಯುಗಂಗಳಲಿ ತಾಪಸರು| ಸಾದರ ಬಹುದಿನದಿಂದಾ| ಸಾಧಿಸುವಗತಿ ಕೊಡುವ ನೊಂದೆ ಕ್ಷಣದಿ| ಶ್ರೀಧರ ತಾ ದಯದಿಂದಾ1 

ಸಂತರ ಸಂಗದಿ ಶ್ರವಣವ ಮಾಡಿ| ಆಂತರ್ಭಾವನೆ ಬಲಿಸೀ| ಭ್ರಾಂತ ನೀನಾಗದೆ ಅನ್ಯ ಸಾಧನದಲಿ| ಸಂತತ ಕೀರ್ತನೆ ಬೆರೆಸೀ2 

ಸಾವಿರಕೊಂದೆ ಈ ನುಡಿ ನಿಜವೆಂದು| ಸಾವಧವನಾದವ ಮನುಜಾ| ಭಾವಿಸು ಗುರುಮಹಿಪತಿ ಪ್ರಭು|ನುಡಿಸಿದ| ಆವನಂಬವನೇ ದನುಜಾ3

****