ಶ್ಯಮಂತಕೋಪಾಖ್ಯಾನ
ಶರಣು ಗಣಪ ಬೇಡುವೇನು ಚರಣಕಮಲಗಳಿಗೆ ಎರಗಿ
ವರವ ಬೇಡಿ ಪಾಲಿಸೆಂದು ಮೊರೆಯ ಹೊಗುವೆನು||೧||
ಧರ್ಮರಾಜ ಪೂಜಿಸಿದ ನಿನ್ನ ಪಾದ ಪದ್ಮಗಳ
ಸಾಧಿಸಿದ ತನ್ನ ರಾಜ್ಯ ಸತ್ಯದಿಂದಲಿ||೨||
ರಾವಣನು ತಾನು ಮದಮೀರಿ ನಿನ್ನ ಪುಜಿಸದೆ
ಪ್ರಾಣಹಾನಿ ಮಾಡಿಕೊಂಡ ಗಜಾನನ||೩||
ಸತ್ರಜಿತರಾಜನು ಸೂರ್ಯನನ್ನು ಧ್ಯಾನಿಸಿ
ಶ್ಯಮಂತಕ ಮಣಿಯನ್ನು ಪಡೆದು ಇದ್ದನು||೪||
ಲೋಕದಾ ಜನರಿಗೆ ತಿಳಿಸ ಬೇಕೆನ್ನುತ
ಪ್ರೀತಿಲಿಂದ ಶ್ರೀ ಕೃಷ್ಣ ಮಣಿಯ ಕೇಳಿದ||೫||
ಸತ್ರಜಿತನ ಸೋದರ ಪ್ರಸನ್ನನೆಂಬುವ
ಮಣಿಯ ಅಪಹರಿಸಿ ಸಿಂಹಕ್ಕೆ ಬಲಿಯಾಗಲು||೬||
.ಸಿಂಹದ ಬಾಯಲ್ಲಿ ಮಣಿಯನ್ನ ನೋಡುತ
ಜಾಂಬವಂತ ಸಿಂಹನ ಕೊಂದು ಮಣಿಯ ತಂದನು||೭||
ತಮ್ಮನ ಕಾಣದಿರಲು ಕೃಷ್ಣನೆ ಕೊಂದನೆಂದು
ರಾಜನು ಬಹಳ ಅಪವಾದ ಕಟ್ಟಿದ||೮||
ಪ್ರಸೇನನ್ನ ಹುಡುಕುತ ಕೃಷ್ಣ ಹೋಗುತಿರಲ ಮುಂದೆ
ಸಿಂಹಕ್ಕೆಬಲಿಯಾದ ವಾರ್ತೆ ತಿಳಿಯುತ||೯||
ಗುಹದೊಳಗೆ ಹೋಗುತಿರಲು ಜಾಂಬವಂತ ನೋಡುತ
ಘೋರ ಯುಧ್ಧವಾಗಿ ರಾಮನನ್ನು ಕಾಣುತ||೧೦||
ರಾಮನನ್ನು ಕಾಣಲು ಪ್ರೇಮದಿಂದ ಅಪ್ಪಿಕೊಂಡು
ಮಗಳ ಕೊಟ್ಟು ಮದುವೆಮಾಡಿ ಮಣಿಯ ಕೊಟ್ಟನು||೧೧||
ತಪ್ಪು ತಿಳಿದ ಸತ್ರಜಿತನು ಭಕ್ತಿಯಿಂದ ಕೈಯ ಮುಗಿದು
ಕ್ಷಮಿಸಬೇಕೆನುತಲಿ ಪಾದ ಕ್ಕೆರಗಿದ||೧೨||
ಚೌತಿಯ ದಿನದಂದು ಚಂದ್ರನ್ನ ನೋಡಿದರೆ
ಇಲ್ಲದ ಅಪವಾದ ಬರುವುದೆನ್ನುತ೧೩||
ಸತ್ಯಲೋಕದಿಂದ ಗಣಪ ಚಂದ್ರಲೋಕ ಸೇರುತಿರಲು
ಎಡವಿ ಬಿದ್ದುದನ್ನು ನೋಡಿ ಚಂದ್ರ ನಕ್ಕನು೧೪||
ತಾನೆ ಚಲುವ ನೆಂಬ ಭ್ರಾಂತಿ ಚಂದ್ರನಿಗೆ ಇರುತಿರಲು
ನಿನ್ನ ನೋಡಲು ಜನಕೆ ಅಪವಾದ ಬರಲಿ ಎಂದನು||೧೫||
ದು:ಖದಿಂದ ಚಂದ್ರನು ಮರುಕದಿಂದ ಬೇಡುತಿರಲು
ಮತ್ತೆ ತನ್ನ ಶಾಪ ಸಂಕುಚಿತ ಮಾಡಿದ||೧೬||
ಭಾದ್ರಪದ ಶುಧ್ಧ ಚೌತಿಯ ದಿನದಂದು
ನಿನ್ನ ನೋಡಿದರೆ ಅಪವಾದ ಬರುವುದು||೧೭||
ಅಂದು ಶ್ರೀ ಕೃಷ್ಞನು ಚೌತಿಯ ದಿನದಂದು
ಚಂದ್ರನನ್ನ ನೋಡಿ ಅಪವಾದ ಪಡೆದನು||೧೮||
ಶ್ಯಮಂತಕ ಮಣಿಯ ಕಥೆ ಭಕ್ತಿಯಿಂದ ಕೇಳಲು
ಬಂದ ಅಪವಾದ ಪರಿಹಾರವಾಗೋದು||೧೯||
ವಿಘ್ನರಾಜನ ಪೂಜೆ ಶ್ರಧ್ಧೆಯಿಂದ ಮಾಡಲು
ವಿಘ್ನ ಬಾರದಂತೆ ನಮ್ಮನ ಸದಾ ಕಾಯುವ||೨೦||
ನೇಮದಿಂದಲೀತನ ಪೂಜೆ ಮಾಡುತ್ತಿರಲು ಮತ್ತೆ
ಸ್ವಾಮಿ ಮಧ್ವೇಶಕೃಷ್ಣ ತಾನೆ ಸಲಹುವ||೨೧||
***
(Sampradayaka hadu)
🌹🌹ಶ್ಯಮಂತಕೋಪಾಖ್ಯಾನ🌹🌹
ಶರಣು ಗಣಪ ಬೇಡುವೇನು ಚರಣಕಮಲಗಳಿಗೆ ಎರಗಿ
ವರವ ಬೇಡಿ ಪಾಲಿಸೆಂದು ಮೊರೆಯ ಹೊಗುವೆನು||೧||
ಧರ್ಮರಾಜ ಪೂಜಿಸಿದ ನಿನ್ನ ಪಾದ ಪದ್ಮಗಳ
ಸಾಧಿಸಿದ ತನ್ನ ರಾಜ್ಯ ಸತ್ಯದಿಂದಲಿ||೨||
ರಾವಣನು ತಾನು ಮದಮೀರಿ ನಿನ್ನ ಪುಜಿಸದೆ
ಪ್ರಾಣಹಾನಿ ಮಾಡಿಕೊಂಡ ಗಜಾನನ||೩||
ಸತ್ರಜಿತರಾಜನು ಸೂರ್ಯನನ್ನು ಧ್ಯಾನಿಸಿ
ಶ್ಯಮಂತಕ ಮಣಿಯನ್ನು ಪಡೆದು ಇದ್ದನು||೪||
ಲೋಕದಾ ಜನರಿಗೆ ತಿಳಿಸ ಬೇಕೆನ್ನುತ
ಪ್ರೀತಿಲಿಂದ ಶ್ರೀ ಕೃಷ್ಣ ಮಣಿಯ ಕೇಳಿದ||೫||
ಸತ್ರಜಿತನ ಸೋದರ ಪ್ರಸನ್ನನೆಂಬುವ
ಮಣಿಯ ಅಪಹರಿಸಿ ಸಿಂಹಕ್ಕೆ ಬಲಿಯಾಗಲು||೬||
.ಸಿಂಹದ ಬಾಯಲ್ಲಿ ಮಣಿಯನ್ನ ನೋಡುತ
ಜಾಂಬವಂತ ಸಿಂಹನ ಕೊಂದು ಮಣಿಯ ತಂದನು||೭||
ತಮ್ಮನ ಕಾಣದಿರಲು ಕೃಷ್ಣನೆ ಕೊಂದನೆಂದು
ರಾಜನು ಬಹಳ ಅಪವಾದ ಕಟ್ಟಿದ||೮||
ಪ್ರಸೇನನ್ನ ಹುಡುಕುತ ಕೃಷ್ಣ ಹೋಗುತಿರಲ ಮುಂದೆ
ಸಿಂಹಕ್ಕೆಬಲಿಯಾದ ವಾರ್ತೆ ತಿಳಿಯುತ||೯||
ಗುಹದೊಳಗೆ ಹೋಗುತಿರಲು ಜಾಂಬವಂತ ನೋಡುತ
ಘೋರ ಯುಧ್ಧವಾಗಿ ರಾಮನನ್ನು ಕಾಣುತ||೧೦||
ರಾಮನನ್ನು ಕಾಣಲು ಪ್ರೇಮದಿಂದ ಅಪ್ಪಿಕೊಂಡು
ಮಗಳ ಕೊಟ್ಟು ಮದುವೆಮಾಡಿ ಮಣಿಯ ಕೊಟ್ಟನು||೧೧||
ತಪ್ಪು ತಿಳಿದ ಸತ್ರಜಿತನು ಭಕ್ತಿಯಿಂದ ಕೈಯ ಮುಗಿದು
ಕ್ಷಮಿಸಬೇಕೆನುತಲಿ ಪಾದ ಕ್ಕೆರಗಿದ||೧೨||
ಚೌತಿಯ ದಿನದಂದು ಚಂದ್ರನ್ನ ನೋಡಿದರೆ
ಇಲ್ಲದ ಅಪವಾದ ಬರುವುದೆನ್ನುತ೧೩||
ಸತ್ಯಲೋಕದಿಂದ ಗಣಪ ಚಂದ್ರಲೋಕ ಸೇರುತಿರಲು
ಎಡವಿ ಬಿದ್ದುದನ್ನು ನೋಡಿ ಚಂದ್ರ ನಕ್ಕನು೧೪||
ತಾನೆ ಚಲುವ ನೆಂಬ ಭ್ರಾಂತಿ ಚಂದ್ರನಿಗೆ ಇರುತಿರಲು
ನಿನ್ನ ನೋಡಲು ಜನಕೆ ಅಪವಾದ ಬರಲಿ ಎಂದನು||೧೫||
ದು:ಖದಿಂದ ಚಂದ್ರನು ಮರುಕದಿಂದ ಬೇಡುತಿರಲು
ಮತ್ತೆ ತನ್ನ ಶಾಪ ಸಂಕುಚಿತ ಮಾಡಿದ||೧೬||
ಭಾದ್ರಪದ ಶುಧ್ಧ ಚೌತಿಯ ದಿನದಂದು
ನಿನ್ನ ನೋಡಿದರೆ ಅಪವಾದ ಬರುವುದು||೧೭||
ಅಂದು ಶ್ರೀ ಕೃಷ್ಞನು ಚೌತಿಯ ದಿನದಂದು
ಚಂದ್ರನನ್ನ ನೋಡಿ ಅಪವಾದ ಪಡೆದನು||೧೮||
ಶ್ಯಮಂತಕ ಮಣಿಯ ಕಥೆ ಭಕ್ತಿಯಿಂದ ಕೇಳಲು
ಬಂದ ಅಪವಾದ ಪರಿಹಾರವಾಗೋದು||೧೯||
ವಿಘ್ನರಾಜನ ಪೂಜೆ ಶ್ರಧ್ಧೆಯಿಂದ ಮಾಡಲು
ವಿಘ್ನ ಬಾರದಂತೆ ನಮ್ಮನ ಸದಾ ಕಾಯುವ||೨೦||
ನೇಮದಿಂದಲೀತನ ಪೂಜೆ ಮಾಡುತ್ತಿರಲು ಮತ್ತೆ
ಸ್ವಾಮಿ ಮಧ್ವೇಶಕೃಷ್ಣ ತಾನೆ ಸಲಹುವ||೨೧||
~~~~~~ಹರೇಶ್ರೀನಿವಾಸ
****