Showing posts with label ಅನಂದವಾಯಿತು ಸ್ವಾನಂದ ಘನಸುಖ ತನುಮನದೊಳಗೆ mahipati. Show all posts
Showing posts with label ಅನಂದವಾಯಿತು ಸ್ವಾನಂದ ಘನಸುಖ ತನುಮನದೊಳಗೆ mahipati. Show all posts

Wednesday, 1 September 2021

ಅನಂದವಾಯಿತು ಸ್ವಾನಂದ ಘನಸುಖ ತನುಮನದೊಳಗೆ ankita mahipati

 kruti by ಕಾಖಂಡಕಿ ಶ್ರೀ ಮಹಿಪತಿರಾಯರು

ಅನಂದವಾಯಿತು ಸ್ವಾನಂದ ಘನಸುಖ ತನುಮನದೊಳಗೆ ತನ್ನಿಂದ ತಾನೊಲಿದು ಖೂನದೋರಿತು ಘನ ಗುರು ಕೃಪೆ ಎನಗೆ 1 

ಸೋಮಾರ್ಕದ ಮಧ್ಯಸ್ವಾಮಿ ಸದ್ಗುರು ಪಾದ ನಮಿಸಿ ನಿಜದೋರಿತು ಜುಮುಜುಮುಗಟ್ಟಿ ರೋಮಾಂಚನಗಳುಬ್ಬಿ ಬ್ರಹ್ಮಾನಂದವಾಯಿತು 2 

ನಾಮ ಸೇವಿಸಿ ಮಹಿಪತಿಗೆ ಸವಿದೋರಿತು ಪ್ರೇಮಭಾವನೆಯೊಳಗೆ ಧಿಮಿಧಿಮಿಗುಡುತ ಬ್ರಹ್ಮಾನಂದದ ಸುಖ ಅನುಭವಿಸಿತೆನಗೆ 3

**