..
ಕೃಪಾಳೊ ಗುರುವರ ಶ್ರೀಪವಮಾನ
ಭಾರತಿ ಭವಹಾರಿ ಸ್ಮರಹರನುತ ದೀನಜನಮಂದಾರ ಅ.ಪ
ಕಾವಕರುಣಿ ಜೀವವರೇಣ್ಯ
ದಿವ್ಯವೃಂದ ವಿನುತ ಜಯಶೀಲಾ
ಪಾವನಾತ್ಮಕ ಪಾಹಿ ಪಾಹಿ
ಭಾವಿ ವಿಧಿ ದುರಿತೌಷ ಹಾರಿ 1
ಆದಿಪುರದಿ ಮೆರೆವನಾಥಾ
ಸದಯ ಭಕ್ತ ಜನಕೆ ಶುಭದಾತ
ಬುಧರಾರಿ ಸಜಾತ ಭ್ರಾತಾ
ಸದಯ ಧರ್ಮಾನು ಜಾತಾ 2
ಪ್ರೇಮಶರಧಿ ವಾನರೇಶಾ
ಅಮಿತ ಸತ್ವಯತಿ ಮಹಿಮಯತಿರಾಜಾ
ರೋರೋಮ ವ್ಯೋಮಕೇಶಾ
ಶಾಮಸುಂದರನ ಮೋಹದ ದಾಸಾ 3
***