Showing posts with label ಅಹುದೋ ದೇವ ನೀ ದಯಯುತನೆಂಬುದು ಸಹಜವೋ ಎಲೆ ರಂಗ ramadasa.a. Show all posts
Showing posts with label ಅಹುದೋ ದೇವ ನೀ ದಯಯುತನೆಂಬುದು ಸಹಜವೋ ಎಲೆ ರಂಗ ramadasa.a. Show all posts

Sunday 5 September 2021

ಅಹುದೋ ದೇವ ನೀ ದಯಯುತನೆಂಬುದು ಸಹಜವೋ ಎಲೆ ರಂಗ ankita ramadasa.a

 ಅಸೂರಿ ರಾಮಸ್ವಾಮಿ ಅಯ್ಯಂಗಾರ್ ankita ramadasa

ಅಹುದೋ ದೇವ ನೀ ದಯಯುತನೆಂಬುದು ಸಹಜವೋ ಎಲೆ ರಂಗ ಪ 


ಮಹದುಪಕಾರವ ಗೈವೆ ಜಗಕೆಲ್ಲ ಅಹುದೋ ಅಹುದೋ ಸಲೆ ಸಲಹುವ ಪಿತ ನೀ ಅ.ಪ ಅಜಗೆ ನೇತ್ರವನಿತ್ತೆ ಗಜಕೆ ಪ್ರಾಣವನಿತ್ತೆ ಅಜಮಿಳನಿಗೆ ಮೋಕ್ಷಪದವಿಯನಿತ್ತೆ ಭಜನೆಗೈಯುವ ತುಂಬುರು ನಾರದರಿಂಗೆ ನಿಜಸುಖ ಸಾಮ್ರಾಜ್ಯ ಪದವಿಯನಿತ್ತೆ 1 

ತರಳನ ನುಡಿಕೇಳಿ ಕಂಬದೊಳುದಯಿಸಿ ದುರುಳರಕ್ಕಸನಶಿಕ್ಷಿಸಿದೆ ತರಳ ಧ್ರುವನು ಗೈದಾ ತಪಸಿಗೆ ನಲಿಯುತೆ ವರಸುಖಪದವಿತ್ತ ಕರುಣಾಕರನೀ 2 

ಭೂತಳದೊಳು ಜನ್ಮವಾಂತಿಹ ಸಾಸಿರ ಚೇತನಾಚೇತನ ವಸ್ತುಗಳನು ನೀ ಪ್ರೀತಿಸಿ ಪೊರೆಯುವ ರೀತಿಯದಾಶ್ಚರ್ಯ ಏ ತೆರ ಪೇಳ್ದೊಡನಂತಮಹಿಮ ನೀ 3 

ದೇವದೇವನೆ ನಿನ್ನ ಪಾವನಚರಣವು ದೇವಮುನಿಗಳೆಲ್ಲ ಸೇವಿಸಲರಿದೈ ಭಾವಜಪಿತ ರಾಮದಾಸಾಚೇತ ಸಾಕು ಜನ್ಮವಬಿಡಿಸೊ ಮಾವಿನಕೆರೆರಂಗಾ 4

***