Showing posts with label ರಂಗನಟ್ಟುಳಿ ಕೇಳಿ ಗೋಪೆಮ್ಮಾ ರಸಗನಾಹಲ ವಂಗದಿಂದ gurumahipati. Show all posts
Showing posts with label ರಂಗನಟ್ಟುಳಿ ಕೇಳಿ ಗೋಪೆಮ್ಮಾ ರಸಗನಾಹಲ ವಂಗದಿಂದ gurumahipati. Show all posts

Wednesday, 1 September 2021

ರಂಗನಟ್ಟುಳಿ ಕೇಳಿ ಗೋಪೆಮ್ಮಾ ರಸಗನಾಹಲ ವಂಗದಿಂದ ankita gurumahipati

 ಕಾಖಂಡಕಿ ಶ್ರೀ ಕೃಷ್ಣದಾಸರು

ರಂಗನಟ್ಟುಳಿ ಕೇಳಿ ಗೋಪೆಮ್ಮಾ ರಸಗನಾಹಲ ವಂಗದಿಂದ ಕಾಡುವನಮ್ಮಾ ಬಾಲನೇ ಗೊಪಾಲನೇ ಪ 


ಹಾಲು ಮೊಸರು ಬೆಣ್ಣೆ ಮಾರಲು ಬಂದರಾ ಚಿಕ್ಕ ಬಾಲೆರ ನೋಡುತ ಮೊಗಚಂದಿರಾ ಅವರಾ ಶಾಲೆಯ ಸೆಳೆದು ಸುಮ್ಮನೇ ನಿಂದಿರಾ ಬಟ್ಟ ಮೊಲೆಯನು ಚಂಡು ಕುಡೆಂಬಾ ಮಂದರಾಧರ ಸುಂದರಾ 1 

ನಾರೇರಾ ಸೀರೆಯಾ ಕದ್ದಾ ಪುಂಡನೇ ಮರ ನೇಚಾಳಿಸಿ ನುಡಿದ ಪ್ರಚಂಡನೇ ಕೈಯ್ಯ ದೋರಿಯರಡು ಎಂದು ಲಜ್ಜೆಯ ಕೊಂಡನೇ ಬಲು ಭಂಡನೇ 2 

ಕಂಸನರಮನೆ ಬಲಗುಂದಿತೇ ನಂದ ನಂಶಕ ವಡೆತನ ಬಂದಿತೇ ಮುರ ದುರುಳ ತನವು ಸಂದಿತೇ ಇನ್ನು ಸಂಶಯಾತಕ ಮಹಿಪತಿ ಸುತ ವಂದಿತೇ ಮನಕ ಬಂದಿತೇ 3

***