Showing posts with label ದಾಸನಾಗಬೇಕು ಸದಾಶಿವನ ದಾಸನಾಗಬೇಕು neleyadikeshava DAASANAGABEKU SADASHIVANA DASANAGABEKU. Show all posts
Showing posts with label ದಾಸನಾಗಬೇಕು ಸದಾಶಿವನ ದಾಸನಾಗಬೇಕು neleyadikeshava DAASANAGABEKU SADASHIVANA DASANAGABEKU. Show all posts

Tuesday, 15 October 2019

ದಾಸನಾಗಬೇಕು ಸದಾಶಿವನ ದಾಸನಾಗಬೇಕು ankita neleyadikeshava DAASANAGABEKU SADASHIVANA DASANAGABEKU

ದಾಸನಾಗಬೇಕು ಸದಾಶಿವನ ದಾಸನಾಗಬೇಕು
ದಾಸನಾಗಬೇಕು ಕ್ಲೇಶಪಂಚಕವಳಿದು |
ಆಸೆಯಲ್ಲಿ ಮನ ಸೂಸದೆ ಸರ್ವದಾ

ಮನದ ಕಲ್ಮಷ ಕಳೆದು – 
ಮಹಾದೇ-ವನ ಮಹಿಮೆಯ ತಿಳಿದು
ಇನಿತು ಈ ಜಗವೆಲ್ಲ ಈಶ್ವರಮಯವೆಂದು
ಘನವಾದ ಮೋಹದ ಗಡಿಯನು ದಾಟುತ ||1||

ತನುವು ಅಸ್ಥಿರವೆನುತ – 
ತಿಳಿದು ಶಂಕರನ ಹೃದಯವ ಕಾಣುತಘನವಾದ 
ಇಂದ್ರಜಾಲವ ಮಾಯೆಯೆನುತಬಿನುಗು 
ಸಂಸಾರದ ಮಮತೆಯ ಬಿಡುತ ||2||

ಆರು ಚಕ್ರದಿ ಮೆರೆವ – 
ಅಖಂಡನಮೂರು ಗುಣವ ತಿಳಿದು
ಆರು ಮೂರು ಹದಿನಾರು ತತ್ತ್ವವ ಮೀರಿತೋರುವ ಕಾಗಿನೆಲೆಯಾದಿಕೇಶವನಡಿ ||3||
*********