Showing posts with label ಮಧ್ವಮುನಿಯೇ ಎನ್ನ ಹೃತ್ಕುಮುದ vijaya vittala MADHWAMUNIYE ENNA HRUTKUMUDA MADHWACHARYA STUTIH. Show all posts
Showing posts with label ಮಧ್ವಮುನಿಯೇ ಎನ್ನ ಹೃತ್ಕುಮುದ vijaya vittala MADHWAMUNIYE ENNA HRUTKUMUDA MADHWACHARYA STUTIH. Show all posts

Thursday, 26 December 2019

ಮಧ್ವಮುನಿಯೇ ಎನ್ನ ಹೃತ್ಕುಮುದ ankita vijaya vittala MADHWAMUNIYE ENNA HRUTKUMUDA MADHWACHARYA STUTIH

 ರಾಗ ಶಿವರಂಜಿನಿ   ಖಂಡಛಾಪುತಾಳ 

Audio by Mrs. Nandini Sripad

ಶ್ರೀ ವಿಜಯದಾಸರ ಕೃತಿ 

ಮಧ್ವಮುನಿ ಎನ್ನ ಹೃತ್ಕುಮುದ ಚಂದ್ರ ॥ ಪ ॥
ಅದ್ವೈತ ಮತಾರಣ್ಯ ದಹನ ಗುಣಸಾಂದ್ರ ॥ ಅ ಪ ॥

ನೊಂದೆ ಎಂಭತ್ತುನಾಲ್ಕು ಲಕ್ಷ ಯೋನಿಯಲ್ಲಿ ।
ಒಂದೇ ಪ್ರಕಾರ ಸಂಚರಣೆಯಿಂದ ॥
ಒಂದೊಂದು ಕರ್ಮವಾ ಅರಸಿ ನೋಡಿದೆ ಅದ - ।
ರಿಂದ ಭವಾಬ್ಧಿಗೆ ವಂದುಪಾಯವ ಕಾಣೆ ॥ 1 ॥

ನೀರು ಚಳಮಳ ಕಾಸಿ ಆರಲಿಟ್ಟು ಹೆಪ್ಪಾ ।
ನೀರಿನಿಂದಲಿ ಕೊಡಲು ಬಪ್ಪುದೇನೂ ॥
ಮಾರುತೀ ನಿನ್ನ ಕೃಪೆ ಪಡಿಯದಲೆ ಉಳಿದವರ ।
ಕಾರುಣ್ಯವಾದರೂ ಮೋಕ್ಷ ಸಾಧನವಲ್ಲ ॥ 2 ॥

ಹರಿಸಿರಿಗೆ ಎರಗುವಾ ಸತ್ವ ಶರೀರನೆ ।
ನಿರುತ ಎನ್ನೊಳಗಿಪ್ಪ ಮುಖ್ಯ ಗುರುವೆ ॥
ನೆರೆನಂಬಿದೆನೊ ಸ್ವಾಮಿ ವಿಜಯವಿಠ್ಠಲನ್ನ ।
ಚರಣದಲ್ಲಿರುವಂತೆ ಸಾಧ್ಯವಾಗಲಿ ಮನಸು ॥ 3 ॥
***

Madhvamuniye enna hrutkumuda chandra ||pa||

Advaitamataranya dahana gunasandra ||a.pa||

Nonde embatnalku lakshayonigalalli
Onde prakara sancagneyinda
Ondondu karmagalanarasi nodalu ada-
Rinda bavabdhige bamdupayava kane ||1||

Niru calapalakasi aralittu heppu
Nirinindali kodalu bappudeno
Maruti ninna krupe padeyadale ulidavara
Karunyavagalu mokshasadhanavilla||2||

Harisirige eraguva satva sarirane
Niruta ennolagippa mulaguruve
Nere nambideno svami vijayaviththalareyana
Caranadalliruvamte sadhyavagali manasu ||3||
***


ಮಧ್ವಮುನಿಯೇ ಎನ್ನ ಹೃತ್ಕುಮುದ ಚಂದ್ರ ||pa||

ಅದ್ವೈತಮತಾರಣ್ಯ ದಹನ ಗುಣಸಾಂದ್ರ ||a.pa||

ನೊಂದೆ ಎಂಭತ್ನಾಲ್ಕು ಲಕ್ಷಯೋನಿಗಳಲ್ಲಿ
ಒಂದೇ ಪ್ರಕಾರ ಸಂಚgಣೆಯಿಂದ
ಒಂದೊಂದು ಕರ್ಮಗಳನರಸಿ ನೋಡಲು ಅದ-
ರಿಂದ ಭವಾಬ್ಧಿಗೆ ಬಂದುಪಾಯವ ಕಾಣೆ ||1||

ನೀರು ಚಳಪಳಕಾಸಿ ಆರಲಿಟ್ಟು ಹೆಪ್ಪು
ನೀರಿನಿಂದಲಿ ಕೊಡಲು ಬಪ್ಪುದೇನೊ
ಮಾರುತೀ ನಿನ್ನ ಕೃಪೆ ಪಡೆಯದಲೆ ಉಳಿದವರ
ಕಾರುಣ್ಯವಾಗಲು ಮೋಕ್ಷಸಾಧನವಿಲ್ಲ||2||

ಹರಿಸಿರಿಗೆ ಎರಗುವ ಸತ್ವ ಶರೀರನೆ
ನಿರುತ ಎನ್ನೊಳಗಿಪ್ಪ ಮೂಲಗುರುವೆ
ನೆರೆ ನಂಬಿದೆನೊ ಸ್ವಾಮಿ ವಿಜಯವಿಠ್ಠಲರೇಯನ
ಚರಣದಲ್ಲಿರುವಂತೆ ಸಾಧ್ಯವಾಗಲಿ ಮನಸು ||3||
********

 


*********