Showing posts with label ಪೂರ್ಣಭೋಧ ಮುನಿರಾಯಾ ಎನ್ನಲಿ ಕರುಣವ ಮಾಡಯ್ಯಾ gurujagannatha vittala. Show all posts
Showing posts with label ಪೂರ್ಣಭೋಧ ಮುನಿರಾಯಾ ಎನ್ನಲಿ ಕರುಣವ ಮಾಡಯ್ಯಾ gurujagannatha vittala. Show all posts

Wednesday, 1 September 2021

ಪೂರ್ಣಭೋಧ ಮುನಿರಾಯಾ ಎನ್ನಲಿ ಕರುಣವ ಮಾಡಯ್ಯಾ ankita gurujagannatha vittala

 ..

ಪೂರ್ಣಭೋಧ ಮುನಿರಾಯಾ ಎನ್ನಲಿ

ಕರುಣವ ಮಾಡಯ್ಯಾ ಪ


ಚರಣವ ನಂಬಿದ ತರುಣನ ಭವ

ಅರಣವ ದಾಟಿಸಿ ಶರಣನ ಪೊರೆಯೋ ಅ.ಪ


ನಿನ್ನ ಮತದಿ ದೀಕ್ಷಾ ಪೊಂದಿಸಿ

ನಿನ್ನ ಕರುಣ ಕಟಾಕ್ಷ

ನಿನ್ನ ಶಾಸ್ತ್ರದಲನನ್ಯ ಭಾವವ

ಮನ್ನಿಸೊ ದಿನದಿನ ಎನ್ನೊಳು ನೆಲೆಸಿದ್ದು 1


ಪಂಚಭೇದಮತಿಯಾ ತರತಮ

ಪಂಚಕ ಭಾವದ ಪರಿಯಾ

ವಂಚನೆÀ ಮಾಡದೆ ಪಂಚಿಕಿ ತಿಳಿಸೆಲೊ

ಮಂಚಿಗೆ ಮರುತ ವಿರಿಂಚಿಯಾಗುವಿ ನೀ 2


ಮಾತರಿಶ್ವ ಹನುಮಾ ಭೀಮಾ

ಯತಿನಾಥ ಮಧ್ವನಾಮಾ

ಖ್ಯಾತ ಮಾಯಿಮತ ವ್ರಾತವನಳಿದ

ದಾತಗುರುಜಗನ್ನಾಥ ವಿಠಲ ಪ್ರಿಯ 3

***