Showing posts with label ಬಾರೋ ದೇವ ದೇವನೇ kamalanabha vittala. Show all posts
Showing posts with label ಬಾರೋ ದೇವ ದೇವನೇ kamalanabha vittala. Show all posts

Friday, 27 December 2019

ಬಾರೋ ದೇವ ದೇವನೇ ankita kamalanabha vittala

by ನಿಡಗುರುಕಿ ಜೀವೂಬಾಯಿ
ಬಾರೋ ದೇವ ದೇವನೇ ಭಾವಜಾರಿಪ್ರಿಯನೆಬಾರೊ ಮನೆಗೆ ಶ್ರೀನಿವಾಸನೆ ಪ

ಬಾರೊ ಭಾಮೆ ರುಕ್ಮಿಣೀಶಬಾರೋಯೋಗಿಹೃದಯವಾಸಬಾರೊ ಭಕ್ತಜನರ ಪೋಷನೇ 1

ನಂದ ಗೋಪ ತನಯಗೋಪ-ವೃಂದದೊಳಗೆ ಕುಣಿದು ಮೆರೆದುಮಂದರೋದ್ಧರಮದನಜನಕನೇ2

ಅಂದಿಗೆ ಕಾಲ್ಗೆಜ್ಜೆ ನಾದ-ದಿಂದ ಕುಣಿದು ನೆರೆದು ನಲಿದುಸುಂದರಾಂಗ ಶುಭಕರಾಂಗನೇ 3

ಸರಿಗೆ ನಾಗಮುರಿಗೆ ಮುತ್ತಿನಸರಗಳ್ಹೊಳಯೆ ಉರದಿ ಲಕ್ಷ್ಮಿಜರಿಪೀತಾಂಬರ ಧಾರಿ ಶೌರಿಯೇ 4

ಕೋಟಿ ಸೂರ್ಯಕಾಂತಿ ಮುಖಲ-ಲಾಟ ಕಸ್ತೂರಿ ತಿಲಕ ಶಿರದಿ ಕಿ-ರೀಟ ಧರಿಸಿ ಮೆರೆವ ದೇವನೇ 5
ಮುರಳಿ ನುಡಿಸಿ ತರುಣಿಯರನುಮರುಳು ಮಾಡಿ ತುರುಕರುಗಳ ಪೊರೆದಕಮಲನಾಭವಿಠ್ಠಲನೆ6
********