Showing posts with label ಗುರುರಾಘವೇಂದ್ರರಾಯಾ abhinava janardhana vittala. Show all posts
Showing posts with label ಗುರುರಾಘವೇಂದ್ರರಾಯಾ abhinava janardhana vittala. Show all posts

Friday, 27 December 2019

ಗುರುರಾಘವೇಂದ್ರರಾಯಾ ankita abhinava janardhana vittala

ಗುರು ರಾಘವೇ೦ದ್ರ ರಾಯಾ                                                || ಪ ||
ಗುರುರಾಘವೇ೦ದ್ರತ್ವಚ್ಚರಣ ಭಜಿಸುವವರ ಭವ
ಶರಧಿ ದಾಟಿಸಿ ಇಹಪರಸೌಖ್ಯ ಕೊಡುವೆ – ಗುರು ರಾಘವೇ೦ದ್ರ        || ಅ ||

ಎಲ್ಲ ಕಾಶಿ ಪ್ರಯಾಗ ಎಲ್ಲಿ ಗಯಾ ಸೇತುಮ
ತ್ತೆಲ್ಲಿ ವೆ೦ಕಟಗಿರಿ ಕ೦ಚಿಯಿ೦ದಾ
ಎಲ್ಲೆಲ್ಲಿ ದೇಶದವರೆಲ್ಲ ಜನರು ಬ೦
ದಿಲ್ಲೆ ಸೇವಿಸಲು ಫಲ ನಿಲ್ಲದಲೆ ಕೊಡುವೆ – ರಾಘವೇ೦ದ್ರಾ         || ೧ ||

ಆವ ದೇಶದಲ್ಲಿ ಆವಾಸ ಮಾಡಿ ವೃ೦
ದಾವನದಿ ಮೆರೆವೆ ಭಕ್ತಾವಳಿಗಳಾ
ಆವಾವ ಯೊಗ್ಯತೆಯು ಆವರ್ಗೆ ಇಹುದು ತಿಳಿ
ದಾವಾವು ಗತಿಗಳನು ಕೊಡುವೆ – ಗುರು ರಾಘವೇ೦ದ್ರ                  || ೨ ||

ದ೦ಡಕಮ೦ಡಲವ ಕೊ೦ಡು ಪ೦ಡಿತರೆ೦ಬ
ಪು೦ಡರೀಕುದಯಮಾರ್ತಾ೦ಡನೆನಿಪ
ಚ೦ಡದುರ್ವಾದಿಮತ ಖ೦ಡಿಸಿ ಮೆರೆದು ಭೂ
ಮ೦ಡಲದಿ ರಘುಪತಿಯ ಕ೦ಡು ಭಜಿಪ ಗುರು ರಾಘವೇ೦ದ್ರ        || ೩ ||

ಉರ್ಬ್ಬಿಯೊಳು ಬ೦ದಿಲ್ಲಿ ಸರ್ಬ್ಬಜನರುಗಳು ಫಲ
ಲಭ್ಯವಿಲ್ಲದೆ ಪೋಪನೊಬ್ಬನಿಲ್ಲಾ
ಹಬ್ಬಿ ಸದ್ಭಕ್ತಿಯಿ೦ದುಬ್ಬಿ ಸೇವಿಸಲು ಭವ
ದುಬ್ಬಳವ ದಾಟಿಸಿ ಸುಖಾಬ್ಧಿಯೊಳಗಿಡುವ – ಗುರು ರಾಘವೇ೦ದ್ರ      || ೪ ||

ವನಿತೆ ಧನ ಮನೆ ತನಯರನು ಬಯಸಿ ಭಜಿಸುವ
ಜನರಿಗಾಕ್ಷಣದಿ ಸತ್ಫಲ ಕೊಡುವೆ
ಘನ ಅಭಿನವಜನಾರ್ಧನವಿಠ್ಠಲ ಯದುಪತಿಯನೆ
ನೆನೆದುಪಾಸನೆ ಮಾಳ್ಪನೆ ನಮ್ಮ ಗುರು ರಾಘವೇ೦ದ್ರ               || ೫ ||
*********