Showing posts with label ದಾಸರೆಂದು ಕರೆದ ಮಾತ್ರದಿ ಈಗ ಎಮ್ಮ gopalakrishna vittala. Show all posts
Showing posts with label ದಾಸರೆಂದು ಕರೆದ ಮಾತ್ರದಿ ಈಗ ಎಮ್ಮ gopalakrishna vittala. Show all posts

Monday, 2 August 2021

ದಾಸರೆಂದು ಕರೆದ ಮಾತ್ರದಿ ಈಗ ಎಮ್ಮ ankita gopalakrishna vittala

ದಾಸರೆಂದು ಕರೆದ ಮಾತ್ರದಿ | ಈಗ ಎಮ್ಮ

ದೋಷರಾಶಿ ನಾಶವಾಯಿತು ಪ.


ಶ್ರೀಶ ತಾನು ಗುರುಗಳಿಂದ

ಈ ಶರೀರಕೀ ಜನ್ಮದಲಿ

ದಾಸತನದ ಪೆಸರನಿಟ್ಟು

ವಾಸುದೇವ ಕಾಯ್ದ ಎನ್ನ ಅ.ಪ.


ಏಸು ಜನ್ಮ ಯತ್ನ ಗೈಯ್ಯಲು | ಭೃತ್ಯಭಾವ

ಪಾಶ ದುರ್ಲಭವು ಸುಜನಕೆ

ಶ್ರೀಶನನುಗ್ರಹದ ಬಲದಿ

ಈಸು ನಾಮ ದೊರೆಯಬೇಕು

ಆಶಪಾಶ ತೊಲಗಿ ಭವ

ಕ್ಲೇಶ ಕೊನೆಗಾಣಿಸುವುದು 1

ಪಂಡಿತನೆಂದೆನಿಸಿ ಮೆರೆಯಲು | ಜಗದೊಳಗೆ

ಕಂಡಮಾತ್ರ ಗರ್ವ ಕಾರಣ

ಮಂಡೆಬಾಗಿ ಹರಿಗೆ ನಿನ್ನ

ತೊಂಡನೆಂದು ನಮಿಸೆ ನಲಿದು

ಪುಂಡರಿಕಾಕ್ಷ ತಾನು

ತಂಡ ತಂಡ ಪಾಪ ಕಳೆವ 2

ಹರಿಯದಾಸರೆಂದು ಎನಿಸಲು | ಧರೆಯೊಳಗೆ

ಸುರರು ಬಯಸಿ ಬರುತಲಿಪ್ಪರು

ಸರ್ವದೇವತೆಗಳು ಬಂದು

ಹರಿಯದಾಸರೆನಿಸಿ ಮೆರೆದು

ಪರಿಪರಿಯ ತತ್ವ ತಿಳುಹಿ

ಹರಿಯ ಪುರಕೆ ತೆರಳಲಿಲ್ಲೆ 3

ದಾಸತನಕೆ ಅಧಿಕವಿಲ್ಲವು | ಸಾಧನವು

ದಾಸತನವು ಗರ್ವವಳಿವಳಿವುದು

ದಾಸ ದಾಸ ದಾಸ ನಿನಗೆ

ವಾಸುದೇವ ಸಲಹೊ ಎನಲು

ದೋಷನಾಶಗೈಸಿ ಹರಿಯು

ದಾಸ ಜನರ ಕಾಯ್ದ ದಯದಿ 4

ಅಷ್ಟು ಭಾಗ್ಯಕಧಿಕ ಲಾಭವು | ದಾಸತನವು

ಶ್ರೇಷ್ಠ ಗುರುಗಳಿಂದ ದೊರಕಿತು

ಇಷ್ಟವೆನಗೆ ದಾಸಪೆಸರು

ಶಿಷ್ಟರೆಲ್ಲ ಕರೆಯಲೀಗ

ತುಷ್ಟಿಪಡುವೆ ಶ್ರೀ ಗೋಪಾಲ-ಕೃಷ್ಣವಿಠಲ ಸಲಹೊ ಎಂದು 5

****