Showing posts with label ನಾಮವನೊದಗಿಸಯ್ಯ ಶ್ರೀಹರಿ ನಿನ್ನ purandara vittala NAAMAVANODAGISAYYA SRIHARI NINNA. Show all posts
Showing posts with label ನಾಮವನೊದಗಿಸಯ್ಯ ಶ್ರೀಹರಿ ನಿನ್ನ purandara vittala NAAMAVANODAGISAYYA SRIHARI NINNA. Show all posts

Tuesday, 5 October 2021

ನಾಮವನೊದಗಿಸಯ್ಯ ಶ್ರೀಹರಿ ನಿನ್ನ purandara vittala NAAMAVANODAGISAYYA SRIHARI NINNA



ನಾಮವನೊದಗಿಸಯ್ಯ ಶ್ರೀಹರಿ ನಿನ್ನ |ನಾಮವನೊದಗಿಸಯ್ಯ ಪ

ನಾಮವನೊದಗಿಸಯ್ಯ ನಾನೆಂಬ ಕರ್ತೃತ್ವ ಬಿಡಿಸಿ |ಸಾಮಜಪೋಷಕ ನಿನ್ನ ಪಾದಸರಸಿಜಗಳಿಗೆರಗುವೆ ಅ.ಪ

ಮಾತನಾಡುವಾಗ ಮಲಗುವಾಗ ನಡೆಯುವಾಗ |ಭೀತಿಗೊಂಡಾಗ ಎಡಹಿಬೀಳುವಾಗ |ಸೀತಾರಾಮ ಗೋವಿಂದ ಶ್ರೀ ವೈಕುಂಠಾಧೀಶ ಅ-|ನಾಥ ಬಾಂಧವ, ಕೃಷ್ಣಾ, ಕೃಷ್ಣಾ ಎಂದು ಕರೆವ 1

ತನು ತಾಳದಂಥಕ್ಷುಧೆದಾಹವಿಕಾರಗ-|ಳನುಭವಿಸುತ ಕಂಗೆಡುವಂಥ ಸಮಯದಲ್ಲಿ ||ವನಜನಾಭಗೋವಿಂದ, ವಾಣೀಪತಿಪಿತ ಕೃಷ್ಣ |ದನುಜಮರ್ದನ ಭಕ್ತ ವತ್ಸಲನೆಂದು ಕರೆವ2

ಆಸಹ್ಯವಾದಜರೆರೋಗಂಗಳಾವರಿಸಿ |ಅಸುಗಳು ಕಂಠಗತವಾಗಿ ಧೃತಿತಪ್ಪಿ ||ವಿಷಮದೂತನ ಕೈವಶವಪ್ಪ ಸಮಯದಲ್ಲಿ |ಬಿಸಜಾಕ್ಷ ಪುರಂದರವಿಠಲನೆಂದು ಕರೆವ 3
****