Showing posts with label ರಾಯ ಬಾರೋ ತಾಯಿ ಬಾ ಎನ್ನ ಕಾಯಲು hanumesha vittala. Show all posts
Showing posts with label ರಾಯ ಬಾರೋ ತಾಯಿ ಬಾ ಎನ್ನ ಕಾಯಲು hanumesha vittala. Show all posts

Tuesday, 1 June 2021

ರಾಯ ಬಾರೋ ತಾಯಿ ಬಾ ಎನ್ನ ಕಾಯಲು ankita hanumesha vittala

ರಾಯ ಬಾರೋ ತಾಯಿ ಬಾ ಎನ್ನ ಕಾಯಲು

ತ್ವರ ಬಾರೋ ನೀ ಗುರು ಪ


ದಿನದಿನಕೆ ಮನಸಿನ ತಾಪವು

ಘನವಾಗುವುದನ್ನು ಬಿಡಿಸಲು ಬಾರದು 1


ಅರಸನಾಗಿ ನೀ ಧರೆಯನಾಳಿದಿ

ಭರತ ಭೂಮಿಯಲಿ ಅವತರಿಸಿದಿ ಮತಿ-2


ವರಗುಣಮಣಿಯೇ ಕರುಣದ ಖಣಿಯೇ

ಶರನಾದವನನ್ನು ಬಿಡಿಸೋ ಬಾ ಗುರು 3


ಬಾಲ್ಹೀಕನೇ ಬಾ ಪ್ರಲ್ಹಾದನೇ ಬಾ

ತಲ್ಲಣಿಸುವೆ ಯತಿ ಆಗಿ ಬಂದ ಗುರು 4


ಸುಮ್ಮನಿರುವೆ ಮತ್ತೊಮ್ಮೆ ಮರಗುವೆ

ಒಮ್ಮನಸಿÀಲ್ಲವೋ ಸನ್ಮುಖನಾಗೈ 5

****