RAO COLLECTIONS SONGS refer remember refresh render DEVARANAMA
ಕಾಖಂಡಕಿ ಶ್ರೀ ಕೃಷ್ಣದಾಸರು
ಹಿಡಿ ಹಿಡಿ ಭಾವದಲೀ ಗುರು ಪಾದಾ ಪ
ಘೋರ ಸಂಸಾರದ ಬಲಿಯನೇ ದಾಟುವ | ಬೀರುವ ಸ್ವಾನಂದ ಬೋಧಾ 1
ಮನಸಿನ ಕಲ್ಪನೆ ಹಾರಿಸಿ ತೋರುವ | ಚಿನಮಯ ನಿಜ ಸುಖ ಪಾದಾ 2
ಗುರುವರ ಮಹಿಪತಿ ಪ್ರಭು ದಯದಿಂದಲಿ | ದೊರೆಯುವ ಪರಮ ಪ್ರಸಾದಾ 3
***