ರಾಗ – ಕಲ್ಯಾಣಿ
ತಾಳ – ಖಂಡಛಾಪು
ರವಿತ್ರಿನೇತ್ರ ನರಸಿಂಹ ದೃಷ್ಟಿವಜ್ರಧರೇಂದ್ರ
ಕವಿಗೇಯ ರಕ್ಷಿಸೆನ್ನ ದಯದಿ ಪಾಪಾದ್ರಿಯಿಂದ ll ಪ ll
ದುಷ್ಟದಮನದಕ್ಷ ಶಿಷ್ಟರಕ್ಷಣಬಧ್ಧದೀಕ್ಷ
ಅಷ್ಟಗುಣ ದುರ್ಗಾರಮಣ ಮೋಚಿತಲಲನ
ವಿಷ್ಣುಪದಚುಂಬಿಸುವರ್ಣಾಭದಿವ್ಯಾನಂದದೇಹ
ಪುಷ್ಟಭುಜದಂಡಸಾಹಸ್ರ ರಕ್ಷ ಹೇಮಾಭನೇತ್ರ ll 1 ll
ದಿತಿಜಕುಂಜರಸಿಂಹ ವೀರದಿತಿಜಾಂತ್ರಮಾಲಿನ್
ದಿತಿಜಬಲಘ್ನಬಾಹುದಂಡ ಬಲಭೀಮನುತ
ಅತಿಚಿತ್ರಶ್ವಾಸಕ್ಷೋಭಿತಾಭ್ಧಿಚತುಷ್ಟಯ ಶೂರ
ಜಿತಕ್ರೋಧ ಸಟಾಕಲಾಪಧೂತಮೇಘಪಟಲ ll 2 ll
ಬಾಗಿದ ಬಾಲನ ಶಿರಕರನಾಗಿ ಲಾಲಿಸಿದೆ
ಯೋಗಿ ಸೇವೆಗೊಳ್ಳಲು ಗಿರಿಶಿಖರದಲಿ ನಿಂತೆ
ಭೋಗಿ ಸೇವೆಗೊಳ್ಳಲು ನೀ ಭೋಗನರಸಿಂಹನಾದೆ
ನಗಗತ ವಿದ್ಯೇಶವಿಟ್ಠಲ ನಿತ್ಯಮದ್ಗೀತನಾಗು ll 3 ll
***