ಕಾಖಂಡಕಿ ಶ್ರೀ ಮಹಿಪತಿರಾಯರು
ನೀನೆ ನಮ್ಮ ಕುಲದೈವ ಅನುದಿನಾರಾಧಿಸುವ ಮುನಿಜನರೊಂದಿಸುವ ಘನಗುರು ದೇವಾದಿ ಶ್ರೀದೇವ 1
ಮಾಡಲರಿಯೆ ನಿಮ್ಮ ನಿಜಭಕ್ತಿ ಕೂಡಿಕೊಳ್ಳಯ್ಯ ಸೇವೆ ಶ್ರೀಪತಿ 2
ಮಾತಿಗಿಲ್ಲವೊ ಅನ್ಯಥಾ ಸ್ವಾಮಿ ನೀನೆವೆ ನಮ್ಮ ದೈವತ ಬ್ರಹ್ಮಾದಿಗಳಿಗೆ ಸನ್ನತ 3
ಅಯ್ಯ ನಿಜಬಾಲಕ ನಾ ನಿಮ್ಮ ತಾಯಿತಂದೆಯು ನೀನೆ ನಮ್ಮ ಸಾಹ್ಯಮಾಡುವ ಸರ್ವೋತ್ತಮ 4
ದೈವ ನೀನಹುದೊ ಸಾಕ್ಷಾತ ಕೈವಲ್ಯನಿಧಿಯು ಶ್ರೀನಾಥ ಭಾವಿಸುವರ ಭಾವಪೂರಿತ ಮಹಿಪತಿಯ ಪ್ರಾಣನಾಥ 5
***