Showing posts with label ಮಾಡು ದಾನಧರ್ಮ ಪರ ಉಪಕಾರ ಮರೆಯದಿರೆಚ್ಚರಿಕೆ ನೀ vaikunta vittala. Show all posts
Showing posts with label ಮಾಡು ದಾನಧರ್ಮ ಪರ ಉಪಕಾರ ಮರೆಯದಿರೆಚ್ಚರಿಕೆ ನೀ vaikunta vittala. Show all posts

Sunday, 1 August 2021

ಮಾಡು ದಾನಧರ್ಮ ಪರ ಉಪಕಾರ ಮರೆಯದಿರೆಚ್ಚರಿಕೆ ನೀ ankita vaikunta vittala

 ..

kruti by ಬೇಲೂರು ವೈಕುಂಠ ದಾಸರು belur vaikunta dasaru


ಮಾಡು ದಾನಧರ್ಮ ಪರ ಉಪಕಾರ

ಮರೆಯದಿರೆಚ್ಚರಿಕೆ ನೀ

ಕೇಡ ನೆನೆಸಬೇಡ ನಂಬಿದಠಾವಿಲ್ಲ

ಕೆಡುವಿ ನೀ ಎಚ್ಚರಿಕೆ ಪ


ಮೂಢರೊಡನೆ ಕೂಡಿ ಮುಂದೆ ನೀ ಕೆಡಬೇಡ

ಮೋಸಹೋಗದಿರೆಚ್ಚರಿಕೆ

ನಾಡೊಳು ಸುಜನರ ನೋಡಿ ನಡೆಯೋ ಕಂಡ್ಯಾ

ನಟನೆ ಬ್ಯಾಡೆಚ್ಚರಿಕೆ 1


ಚೆನ್ನಾಗಿ ಗಳಿಸಿದೆ ನಾ ಬದುಕಿದೆನೆಂಬೊ

ಚೇಷ್ಟೆ ಬ್ಯಾಡೆಚ್ಚರಿಕೆ

ಮುನ್ನ ಮಾಡಿದ ಪುಣ್ಯಫಲದಿಂದ ಬಂದದ್ದು

ಮುಂದೆ ನೋಡೆಚ್ಚರಿಕೆ 2


ಕಾಲದೂತರು ಬಂದು ಕಾಯವ ಎಳೆವರೊ

ಕಾಣಬಾರದೆಚ್ಚರಿಕೆ ನಮ್ಮ

ವೇಲಾಪುರವಾಸ ಚನ್ನಕೇಶವನ

ಮರೆಯದಿರೆಚ್ಚರಿಕೆ 3

***