..
kruti by ಬೇಲೂರು ವೈಕುಂಠ ದಾಸರು belur vaikunta dasaru
ಮಾಡು ದಾನಧರ್ಮ ಪರ ಉಪಕಾರ
ಮರೆಯದಿರೆಚ್ಚರಿಕೆ ನೀ
ಕೇಡ ನೆನೆಸಬೇಡ ನಂಬಿದಠಾವಿಲ್ಲ
ಕೆಡುವಿ ನೀ ಎಚ್ಚರಿಕೆ ಪ
ಮೂಢರೊಡನೆ ಕೂಡಿ ಮುಂದೆ ನೀ ಕೆಡಬೇಡ
ಮೋಸಹೋಗದಿರೆಚ್ಚರಿಕೆ
ನಾಡೊಳು ಸುಜನರ ನೋಡಿ ನಡೆಯೋ ಕಂಡ್ಯಾ
ನಟನೆ ಬ್ಯಾಡೆಚ್ಚರಿಕೆ 1
ಚೆನ್ನಾಗಿ ಗಳಿಸಿದೆ ನಾ ಬದುಕಿದೆನೆಂಬೊ
ಚೇಷ್ಟೆ ಬ್ಯಾಡೆಚ್ಚರಿಕೆ
ಮುನ್ನ ಮಾಡಿದ ಪುಣ್ಯಫಲದಿಂದ ಬಂದದ್ದು
ಮುಂದೆ ನೋಡೆಚ್ಚರಿಕೆ 2
ಕಾಲದೂತರು ಬಂದು ಕಾಯವ ಎಳೆವರೊ
ಕಾಣಬಾರದೆಚ್ಚರಿಕೆ ನಮ್ಮ
ವೇಲಾಪುರವಾಸ ಚನ್ನಕೇಶವನ
ಮರೆಯದಿರೆಚ್ಚರಿಕೆ 3
***
No comments:
Post a Comment