Showing posts with label ದಾಸವರ್ಯರ ದಾಸ ಕರ್ಜಿಗಿ hks phala stuti ಹರಿಕಥಾಮೃತಸಾರ ಫಲ ಸ್ತುತಿ gurushreesha vittala. Show all posts
Showing posts with label ದಾಸವರ್ಯರ ದಾಸ ಕರ್ಜಿಗಿ hks phala stuti ಹರಿಕಥಾಮೃತಸಾರ ಫಲ ಸ್ತುತಿ gurushreesha vittala. Show all posts

Wednesday 1 September 2021

ದಾಸವರ್ಯರ ದಾಸ ಕರ್ಜಿಗಿ hks phala stuti ಹರಿಕಥಾಮೃತಸಾರ ಫಲ ಸ್ತುತಿ ankita gurushreesha vittala

ಶ್ರೀ ಗುರು ಶ್ರೀಶರಾಯರ ಫಲಶ್ರುತಿ ( 3 ಪದ್ಯಗಳು )


ದಾಸವರ್ಯರ ದಾಸ ಕರ್ಜಿಗಿ ।

ದಾಸರೆಂಬರ ಈ ಸುವಾಕ್ಯ । ಉ ।

ದಾಸೀನವ ಮಾಡದಿರಿ -

ಶ್ರೀ ಹರಿ ದಾಸರಾದವರು ।।

ಕಾಶಿ ಮೊದಲಾದ ಸುಕ್ಷೇತ್ರದಿ ।

ವಾಸ ಮಾಡಲು ಈ ಸುಜನ । ಸಹ ।

ವಾಸ ಫಲ ದೊರಕುವದೆ -

ಶೋಧಿಸೆ ಸಕಲ ಶಾಸ್ತ್ರದಲಿ ।। 1 ।।

ಹರಿಕಥಾಮೃತಸಾರಕ್ಕೆ ಶ್ರೀ ಶ್ರೀದ ವಿಠ್ಠರು ಬರೆದಿರುವ ಫಲಶ್ರುತಿಯ ವಾಕ್ಯಗಳೆಲ್ಲಾ ಸತ್ಯವಾದುವು. ಅದರ ಬಗ್ಗೆ ಶ್ರೀ ಹರಿಯ ದಾಸರು ಔದಾಸೀನ್ಯವನ್ನು ಹೊಂದಬಾರದು. ಕಾಶಿ ಮೊದಲಾದ ಕ್ಷೇತ್ರ ವಾಸಕ್ಕಿಂತಲೂ ಇಂಥಹ ಸಜ್ಜನರ ಸಹವಾಸ ದೊಡ್ಡದು ಎಂದು ತಾತ್ಪರ್ಯ!

ಶ್ರೀವರನ ದಾಸರಿಗೆ ಭಕುತಿಯಲಿ ।

ಸೇವಕನು ನಾನೆಂದು ಪೇಳುವ ।

ಜೀವನವ ಸಜ್ಜೀವಿ -

ಆವ ಹರಿದಾಸನೆಂದರಿದು ।।

ಆವನಾದರೂ ಆದಿಯಲಿ ಇದ ।

ಭಾವ ಶುದ್ಧದಿ ಓದಿ ಬರೆಯಲು ।

ಕಾವನಯ್ಯನು ಕರುಣಿಸುವನು -

ಸದಾವಕಾಲದಲಿ ।। 2 ।।

ಶ್ರೀ ಮಹಾಲಕ್ಷ್ಮೀ ಪತಿಯಾದ ಶ್ರೀ ಹರಿಯ ದಾಸರಿಗೆ ಭಕ್ತಿಯಿಂದ ನಾನು ಸೇವಕ ಎಂದು ಹೇಳುವ ಜೀವನು ಸುಜೀವಿ! ಅವನು ಹರಿದಾಸನು ಎಂದು ತಿಳಿದು ಯಾವನಾದರೂ ಮೊದಲಿಗೆ ಹರಿಕಥಾಮೃತಸಾರವನ್ನು ಶುದ್ಧ ಮನಸ್ಸಿನಿಂದ ಓದಿ ಬರೆಯಲು ಕಾಯುವವರ ಒಡೆಯನಾದ ಶ್ರೀಮನ್ನಾರಾಯಣನು ಎಲ್ಲಾ ಕಾಲಗಳಲ್ಲೂ ಸದಾ ಕರುಣಿಸುವವನು!

ಹರಿಕಥಾಮೃತಸಾರ ನೋಡುವ ।

ಪರಮ ಭಕ್ತರ ಜ್ಞಾನ ದೃಷ್ಟಿಗೆ ।

ವರ ಸುಲೋಚನದಂತೆ -

ಇಪ್ಪವು ಈ ಸುಪದ್ಯಗಳು ।।

ಅರಸಿಕರಿಗಿದು ಪೇಳಲಾಗದು ।

ಮುರಹರನ ದಾಸರಿಗೆ ತಪ್ಪದೆ ।

 ಹರುಷ ಸುರಿಸುವನಿಹಪರದಿ -

ಗುರುಶ್ರೀಶವಿಠ್ಠಲನು ।। 3 ।।

***