..
ಮಂಗಳೆಂದು ಪಾಡಿಕೆ ಶ್ರೀರಂಗನಿಗೀಗ
ಭೃಂಗಾಲಕಿಯರು ಕೂಡಿ ಶೃಂಗಾರದಿ ಬೇಗ ಪ
ದೇವಾಧಿದೇವ ಹರಿಗೆ ದೇವೌಷ ವಂದ್ಯಗೆ
ಗೋವರ್ಧನಾದ್ರಿಧರಗೆ ಗೋವೃಂದ ಪಾಲಗೆ
ಪಾವನಾಂಗ ಪಾವಿನ ಮೇಲೆ
ಪವಳಿಸಿದವಗೆ ಭೃಂಗಾಲಕಿಯರು 1
ಮೀನಾಗ ಫಾಣಿಕಿಟಗೆ ಶ್ರೀನಾರಿಸಿಂಹಗೆ
ಕ್ಷೋಣಿಯ ತೊರೆದ ದಶಾನನಾರಿಗೆ
ಧೇನುಪಾಲ ಸ್ಥಾಣು ಬಾಣ ಘೋಟಕಧ್ವಜಗೆ ಭೃಂಗಾಲಕಿಯರು 2
ಪ್ರೇಮಾಬ್ಧಿ ಪವನ ಪಿತಗೆ ಹೇಮಾಂಬಕಾರಿಗೆ |
ಸಾಮಜೇಂದ್ರ ಪ್ರಿಯಗೆ ತ್ರಿಧಾಮ ದೇವಗೆ
ಶಾಮಸುಂದರ ವಿಠಲ ಸುಧಾಮ ಸಖಗೆ ಭೃಂಗಾಲಕಿಯರು 3
***