ಭಜಕಾಮರ ತರು ಜೀಯ ಗುರುರಾಯ
ಭಜಕಾಮರ ತರು ಜೀಯ IIಪII
ಭಜಕಾಮರ ತರು ಸುಖ ತೀರ್ಥರ ಕರು
ಚಿಂತಿತ ಸುಖಕೊಡುವ ಗುರುರಾಯ
ತುಂಗ ತರಂಗದಿ ರಾಜಿಪ ಚಂದ್ರ
ರಂಗ ಚರಣ ಸರಸಿಜ ಭೃಂಗI
ಬೃಂದಾವನದಿ ಇಂದಿಗೂ ಇರುವ
ಮಂತ್ರಾಲಯ ಪ್ರಭು ಗುರುರಾಯ II1II
ಕಂದ ನೀನಿರುವಾಗ ಕಂಬದಲಿ ಹರಿ ಬಂದ
ದಂಡವ ಪಿಡಿದಾಗ ಹರಿ ಕಂದನಾಗಿ ಕುಣಿದ I
ಕಂದರ್ಪ ಜನಕನ ಪ್ರೇಮದ ಕಂದ
ತಂದೆ ಜನಕಾನಂದ ಗುರುರಾಯ II2II
ವೇದ ಪುರಾಣದ ಗಂಟನು ಬಿಡಿಸಿದೆ
ಗದ್ಯ-ಪದ್ಯ ಗಳಿಂದ I
ಮೋದಗೊಳಿಸಿದೆ ದಾಮೋದರ ವಿಠಲನ
ವೀಣಾ ವಾದನದಿಂದ ಗುರುರಾಯ II3II
******