Showing posts with label ಶರಣು ರಾಘವೇಂದ್ರ ಗುರುವೆ krishnavittala. Show all posts
Showing posts with label ಶರಣು ರಾಘವೇಂದ್ರ ಗುರುವೆ krishnavittala. Show all posts

Monday, 2 August 2021

ಶರಣು ರಾಘವೇಂದ್ರ ಗುರುವೆ ankita krishnavittala

 ಸುವ್ವಿಮಟ್ಟು

ಶರಣು ರಾಘವೇಂದ್ರ ಗುರುವೆ

ಶರಣು ವ್ಯಾಸರಾಜ ಪ್ರಭವೆ

ಶರಣು ನಾರಸಿಂಹ ಭಕ್ತ

ಶರಣು ಶರಣು ಶಂಕು ಕರ್ಣನೆ ಪ


ನಿರುತ ನಿಮ್ಮ ಚರಣ ಕಮಲ

ಗೆರಗಿ ಎರಗಿ ಬೇಡಿ ಕೊಂಬೆ

ತರಿದು ದುರಿತ ರಾಶಿ ಭರದಿ

ಹರಿಯ ಕರುಣ ಕೊಡಿಸು ಕರುಣಿಯೆ ಅ.ಪ

ವಿಧಿಯ ಶಾಪ ಧರಿಸಿ ಮುದದಿ

ಉದಿಸಿ ಬಂದು ದೈತ್ಯ ಕುಲದಿ

ಹೃದಯ ಗತನೆ ವಿಶ್ವವ್ಯಾಪ್ತ

ಪದುಮನಾಭನೆಂದು ತೋರ್ದೆಹೋ

ಬುಧರ ಮಕುಟ ಭಕ್ತಿ ಶರಧಿ

ಅಧನ ರಾಜ ಮದನ ತೇಜ

ಮಧುರ ಬೋಧ ಮಧ್ವ ಚೇಲ

ತ್ರಿದಶ ಮಾನ್ಯ ಪ್ರಹ್ಲಾದ ಬಾಹ್ಲೀಕ 1

ಕಲಿಯು ಬರಲು ಗುರುವು ಸಹಿತ

ತುಳಿದು ಶೃತಿ ವಿರೋಧ ಬೋಧೆ

ಸಲಹೆ ಸುಜನ ತತಿಯ ಸುಮತಿ

ಚಲುವ ಕುವರ ನೆನಿಸಿ ಬಂದೆ ಹೋ

ಬಲಿಸಿ ಕೃಷ್ಣನನ್ನು ಕುಣಿಸಿ

ಬಲಿಸಿ ವಾಯು ಮತವ ಮೆರಸಿ

ಒಲಿದು ನೃಪಗೆ ರಾಜ್ಯವಾಳಿ

ಹಳಿದೆ ವಿಧುವ ಕೀರ್ತಿ ವಿಭವದಿ 2

ಮತ್ತೆ ಬಂದೆ ರಾಘವೇಂದ್ರ

ಹತ್ತು ಆರು ಮತ್ತೆ ನಾಲ್ಕು

ಮೊತ್ತ ಕಲೆಗಳೆಲ್ಲ ಬಲ್ಲ

ಸತ್ಯ ಪ್ರಾಣ ಶಾಸ್ತ್ರ ಮೆಲ್ಲನೆ

ಎತ್ತ ಸಾಟಿ ಕಲ್ಪವೃಕ್ಷ

ನಿತ್ಯ ವಿವಿಧ ಮಹಿಮೆ ತೋರ್ಪೆ

ಇತ್ತು ಪೊರೆವೆ ಜನರ ಬಿಢೆಯ

ಭಕ್ತಿ ವಿತ್ತ ನೀಡು ಭೃತ್ಯಗೆ 3

ನಾರಸಿಂಹ ವೇದ ವ್ಯಾಸ

ಮೂರುತೀಶ ರಾಮಚಂದ್ರ

ಸೂರಿಗಮ್ಯ ಕೃಷ್ಣ ದೇವ

ಭಾರಿ ಮಧ್ವ ಸುರರು ಎಲ್ಲರು

ಸೇರಿ ನಿಮ್ಮ ನಡಿಸಿ ಕಾರ್ಯ

ಸೂರೆ ಗೈಸುತಿರಲು ಕೀರ್ತಿ

ಪಾರವಿಲ್ಲ ಮಹಿಮೆಗೆಂಬೆ

ಈರ ಪಿತನ ಕರುಣ ಭೂಷಿತ 4

ರಾಘವೇಂದ್ರ ನಿಮ್ಮ ನಾಮ

ಯೋಗ್ಯ ಜಪಿಸೆ ಭಕ್ತಿಯಿಂದ

ಶ್ರೀಘ್ರನಾಶ ಅಘಸಮೂಹ

ಹಾಗೆ ಸಿದ್ಧಿ ವಾಂಛಿತಂಗಳು

ಯೋಗ ಸಿದ್ಧಿ ಭೋಗ ಸಿಧ್ಧಿ

ಯೋಗ ಪತಿಯ ಭಕ್ತಿ ಸಿಧ್ಧಿ

ಬೇಗ ಪಡೆದು ಕ್ರಮದಿ ಭವದ

ಬೇಗ ನೀಗಿ ಮುಕ್ತಿ ಕಾಂಬುವ 5

ದಾನ ಗೈದನಿಷ್ಟ ಪುಣ್ಯ

ದೀನ ಸುಜನ ಶಿಷ್ಯ ತತಿಗೆ

ಶ್ರೀನಿವಾಸನನ್ನು ಯಜಿಪ

ದಾನ ಶೌಂಡ ನಿಮಗೆ ಸಾಟಿಯ

ಕಾಣೆ ಕಾಣೆ ಸತ್ಯ ಸತ್ಯ

ನಾನು ಮೂಢ ಪಾಪಿ ಕೃಪಣ

ಏನು ಸೇವೆ ಮಾಡಲಾಪೆ

ಭಾನು ತೆರದಿ ಕಾಯ ಬೇಕೆಂಬೆ 6

ನಿನ್ನ ನೆನೆದ ಮಾತ್ರಕಿನ್ನು

ಅನ್ನ ವಸನ ಎಲ್ಲ ಸಿಧ್ಧ

ಹೊನ್ನು ಹೆಣ್ಣು ಮಣ್ಣು ಮಿಷಯ

ನಿನ್ನ ಕೇಳ್ವ e್ಞÁನಿ ಆಹನೆ

ಮನ್ನಿಸೆನ್ನ ದೋಷರಾಶಿ

ನಿನ್ನ ಶಿಷ್ಯನೆಂದು ಗ್ರಹಿಸು

ಮನ್ನ ಮಾಡು ಭವವ ಬೇಗ

ಕಣ್ಣು ನೀಡು e್ಞÁನ ದೆಂಬುವೆ 7

ಜಯ ಸುಧೀಂದ್ರ ಪ್ರೇಮ ಪುತ್ರ

ಜಯ ವಿಜೀಂದ್ರವರ ಸುಪೌತ್ರ

ಜಯ ಜಯೇಂದ್ರ ಕರುಣ ಪಾತ್ರ

ಜಯ ಕವೀಂದ್ರ ಮಧ್ವ ಛಾತ್ರನೆ

ಜಯ ಭವಾಭ್ದಿ ಪೋತ ಚರಣ

ಜಯ ದಯಾಭ್ದೆ ಸುಗುಣ ಕೋಶ

ಜಯ ಯತೀಂದ್ರ ಕಾಮಧೇನು

ಜಯವು ಜಯವು e್ಞÁನ ಭಾಸ್ಕರ 8

ಸತ್ಯಸಂಧ ಸತ್ಯ ಸ್ತಂಭ

ಸತ್ಯ ಭೃತ್ಯ ಸತ್ಯ ವೇತ್ತ

ಸತ್ಯನಾಥ ನೊಲಿ ಮೆಯಿಂದ

ಹೃಸ್ಥ ಹರಿಯು ನಿತ್ಯ ಕಾಂಬನೆ

ಸತ್ಯ ಮಾತೆ ಸಿರಿಯ ನಾಳ್ವ

ಮುಕ್ತಿದಾತ ಕೃಷ್ಣವಿಠಲ

ಚಿತ್ತದಲ್ಲಿ ಸುಳಿಯಲೆಂಬಭೃತ್ಯ ಬಯಕೆ ಸತ್ಯ ಮಾಡ್ಪ್ರಭೋ 9

****