Audio by Mrs. Nandini Sripad
ವ್ಯಾಸವಿಟ್ಠಲಾಂಕಿತ ಶ್ರೀಕಲ್ಲೂರು ಸುಬ್ಬಣ್ಣಾಚಾರ್ಯ ದಾಸಾರ್ಯ ವಿರಚಿತ
ಶ್ರೀಹರಿ ಮಹಿಮಾ ಸ್ತೋತ್ರ ಸುಳಾದಿ
(ಶ್ರೀಹರಿ ಮಹಿಮಾ ಸ್ತೋತ್ರ ಪೂರ್ವಕ ಶ್ರೀಹರಿಯೆ ನಿನ್ನ ನಂಬಿದವರ ಮರೆಯದಿರು. ಕರ ಚರಣ ಮನಾದಿ ಇಂದ್ರಿಯಗಳನ್ನು ನಿನ್ನ ಪರವಾಗಿ ಮಾಡಿ , ನಿನ್ನ ದಾಸರ ಸಂಗ ಕೊಡೆಂದು ಪ್ರಾರ್ಥನೆ)
ರಾಗ ಆರಭಿ
ಧ್ರುವತಾಳ
ಶ್ರೀಯರಸನೆ ಶೃಂಗಾರ ಗುಣಾಂಬುಧಿ
ಮಾಯವರ್ಜಿತ ಮದನಕೋಟಿ ತೇಜ
ತೋಯಜ ನಯನ ಸರ್ವ ಜಗದಂತರ್ಯಾಮಿ ಸುರ -
ಗೇಯ ಜ್ಞಾನಾನಂದ ಕಾಯೋ ಕರುಣಿ
ಹೇಯೋಪಾದೇಯ ರಹಿತ ಹೆಂಗಳ ಮೊರೆಯ ಕೇಳಿ
ಕಾಯಿದ ಮಹಿಮ ಕಂಬು ಚಕ್ರಾಂಕಿತ
ಆಯಾಸ ವರ್ಜಿತ ಅಜಭವಾದಿಗಳಿಗೆ
ಸಾಯುಜ್ಯವಿತ್ತು ಸರ್ವಕಾಲದಲ್ಲಿ
ನ್ಯಾಯದಿಂದಲಿ ಸ್ವಸ್ವಾನಂದವನುಣಿಸುತ
ಪ್ರೀಯನೆಂದೆನಿಸುವ ಪ್ರೀತಿವಂತಾ
ಓ ಯೆಂದು ಕೂಗಿ ನಿನಗೆ ಮಾತು ಉಸುರುವೆ ಎಮ್ಮ
ಗುರುರಾಯರಂತರಿಯಾಮಿ ರಘುನಂದನ
ಹೇಯ ಕರ್ಮಗಳೆಂಬೊ ಹೆಬ್ಬುಲಿ ಬಲಿಗೆ ಸಿಲುಕಿ
ಬಾಯ ಬಿಡುವೆನೊ ಸ್ವಾಮಿ ಭಕುತರೊಡಿಯಾ
ಈಯವನಿಯೊಳಗೆ ಇದರಿಂದ ಉಳಿವ ಅನ್ಯೋ -
ಪಾಯವೆಂಬೋದು ಕಾಣೆ ನಿನ್ನ ವಿನಃ
ತಾಯಿ ತನ್ನ ಶಿಶುವು ತನಗೆ ಹರುಷವೆಂದು
ವಾಯುಸಖ ತುಡಿಕೆ ನೋಡುವಳೆ
ನ್ಯಾಯವೆ ಜಗದೊಳಗೆ ಅನಂತ
ತಾಯಿಯಂದದಲಿಪ್ಪ ತಮವರ್ಜಿತಾ
ಕಾಯಬೇಕೆನ್ನ ಕರ್ಮಕೆಳೆಗ್ಯಾದಿಗೆ ಸಾ -
ಹಾಯವಾಗಿಪ್ಪ ಸತತ ನಿರ್ವಿಕಾರ
ಪೇಯಪನನುಜ ನಮ್ಮ ವ್ಯಾಸವಿಟ್ಠಲ ಮುನಿ -
ಗೇಯ ಮುಕ್ತಾಶ್ರಯ ಮುಚಕುಂದ ವರದಾ ॥ 1 ॥
ಮಟ್ಟತಾಳ
ಅಂಬುಜ ಭವನಯ್ಯ ಕಂಬು ಚಕ್ರಪಾಣಿ
ಶಂಬರಾದಿ ಜನಕ ಶಾಮ ಸೀತಾಂಗ ಹೃದ -
ಯಾಂಬರ ನಿವಾಸಾ ಹಂಬಲಿಸುವ ಜನಕೆ ಹಗಲಿರುಳು ಬಿಡದೆ
ಬೆಂಬಲವಾಗಿದ್ದು ಬೇಡಿದಾ ದಿವಾರಾತ್ರಿ ತ್ರಿ -
ಯಂಬಕ ಸಹಾಯ ತ್ರಿಗುಣ ರಹಿತ ಕಾಯಾ
ತುಂಬರಾದಿ ವಂದ್ಯ ತುರಿಯ ನಾಮಕ ದೇವ
ಅಂಬುಚರಗೆ ಸಿಲುಕಿ ಅಳಲಿ ಬಹುಕಾಲಾ
ಇಂಬುಗಾಣದೆ ನಿನ್ನ ಇಚ್ಛೈಸಲು ಬಂದು
ತಂಬಲಾ ಪಾಣಿಯಲಿ ತಡವರಿಸಿದ ಕರುಣಿ
ಮುಂಬಿಸಲಿಗೆ ಕುಮುದ ಮುದರಿದಂತೆ ಆ -
ರೆಂಬ ಕರ್ಮವು ಎನ್ನ ಅಲ್ಪಗೊತ್ತಿದ ವೇ -
ನೆಂಬೆ ವಿಶ್ವಮೂರ್ತಿ ವಿಹಂಗ ಗಮನ ವಿಭುವೆ
ನಂಬಿದವರ ಪೊರೆವ ವ್ಯಾಸವಿಟ್ಠಲ ನೀ -
ನೆಂಬವರನ ನಂಬಿದ ನೀಚನ ಮರಿಯಾದಿರು ॥ 2 ॥
ತ್ರಿವಿಡಿತಾಳ
ಶ್ರವಣದಲಿ ಮನಸು ಲವ ಮಾತ್ರ ಎರಗದು
ಕವಿಗಳ ವೊಡನೆ ಸ್ನೇಹವ ಬಳಸದು
ರವಿ ಉದಯಸ್ತಮಾನ ದಿವಸದೊಳಗೆ ಮಾ -
ಧವನೆ ನಿನ್ನಯ ನಾಮವ ಜಿಹ್ವೆ ನುಡಿಯದು
ಸವಿಯದ ನಾನಾ ರಸವ ನುಂಡು ಬಹುಕಾಲ
ಸವೆದು ಪೋದವು ನಟ್ಟ ಮನವು ಇನ್ನು ತಿರುಗದು
ತವ ವಿಸ್ಮೃತಿಯಲಿಂದ ಭೂವನದೊಳಿದ್ದ ಮಾ -
ನವರ ಚರಿಯದಲಿ ಕೋಪವೆ ತಗ್ಗದು
ಎವೆ ಇಡುವಿನಿತು ಕಾಲವಾದರು ಪೂಜಾ
ವಿವರದಲ್ಲಿಗೆ ಚಿತ್ತವು ನಿಲ್ಲದು ಭವ ವಿದೂರನೆ ಕೇಳು
ಕವಲ ಬುದ್ಧಿಯಲಿಂದ ನವನವ ರೂಪದ ಯುವತಿಯರ
ನಿವಹದ ಅನುಭವ ದ್ವಿವಿಧವಿಂದಿಗೇ ಕಾ -
ಯವ ನೋಡಲಿದ್ದಂತೆ ಇಲ್ಲದಂತೆ
ಧ್ರುವದಲಿ ನುಡಿವೆ ಎನ್ನವಗುಣವಿನ್ನೊಂದು
ಭವಸಾಗರವ ದಾಟಿಸುವ ಜ್ಞಾನಿಗಳ ಪ್ರಿಯನ
ತಗ್ಗುವಂತೆ ಚತುರ ತೋರುವೆ
ಇವುಗಳಿಂದಾಗುವ ಜವನ ಬಾಧಿಯ ಬಲ್ಲೆ
ಜೀವದಲ್ಲಿ ಹೀನ ಜನ್ಮವ ಬರುವುದ ಬಲ್ಲೆ
ಸ್ಥಾವಿರಾಯ ವ್ಯಾನಾದಿ ನೆಗುವವು ಪುಣ್ಯಾಖ್ಯ ಗಿರಿಗೆ
ಪವಿಯಂಬದನುಗಾಲ ಪಠಿಸಬಲ್ಲೆ
ಪವನಂತರ್ಯಾಮಿ ಶ್ರೀವ್ಯಾಸವಿಟ್ಠಲ ಇಂಥ
ಅವಿವೇಕ ಮನುಜಂಗೆ ಆವಗತಿಯಾಗುವದೊ ॥ 3 ॥
ಅಟ್ಟತಾಳ
ಅನ್ಯಾಯ ನಡತಿಗಳ ಚರಿಸುತಲಿಪ್ಪ
ಮನುಜಾಧಮನಿಗೆ ಮಹಿಯೊಳಗೆ ವಿಪ್ರ -
ಜನ್ಮವನೀನಿತ್ತದಾವ ಬಗೆಯ ಕಾಣೆ
ಇನ್ನೀಗ ಮಾಡುವ ಅನ್ಯಾಯ ನಡತಿಯು
ತಣ್ಣನ ಕಿಡಿಯಂತೆ ತತ್ಕಾಲಕ್ಕಿಪ್ಪದು
ಘನ್ನ ಬವಣೆ ಮುಂದೆ ಅನುಭವವೇ ನಿಜ
ಪನ್ನಗಶಯನ ಶ್ರೀವ್ಯಾಸವಿಟ್ಠಲ ಸುಪ್ರ -
ಸನ್ನ ವದನ ದೇವ ನಿನ್ನ ಪಾದವೆ ಗತಿ ॥ 4 ॥
ಆದಿತಾಳ
ನಿನ್ನ ದಾಸರ ಪಾದ ಚನ್ನಾಗಿ ಪೊಂದಿಸಿ
ನಿನ್ನವನಿವನೆಂದು ಮನುಜರಿಂದ ನುಡಿಸಿ
ನಿನ್ನ ಕೀರ್ತನೆಯ ವದನದಿಂದ ಪೇಳಿಸಿ
ಇನ್ನು ಈ ಬಗೆ ಮಾಳ್ಪರೆ ಘನ್ನ ದಯಾಂಬುಧೆ
ಮನ್ನ ವಾಚ ಕಾಯದಿ ಅನ್ಯಾಯ ಪೆಚ್ಚಿಸದೆ
ಎನ್ನ ಬೆಳವಿಗೆಯಂತೆ ಬೆಳಸದಂತೆ ಮಾಡಿದೆ
ಮನ್ನಣಿಸು ಜನರಿಂದ ಮಾಂದ್ಯವ ಮಾಡಿಸಿದೆ
ಸನ್ಯಾಯವಲ್ಲ ಧೊರಿಯೆ ನಿನ್ನ ಚಿತ್ತವೊ ಸ್ವಾಮಿ
ಸನ್ಮುನಿಗಣಪ್ರೀಯ ವ್ಯಾಸವಿಟ್ಠಲರೇಯಾ
ನಿನ್ನವರವನೊ ನಿನ್ನ ಸರಿಬಂದ ಬಗೆ ಮಾಡೊ ॥ 5 ॥
ಜತೆ
ವೇಣುಗೋಪಾಲ ದಾಸರ ಮನಮಂದಿರಾ
ಪ್ರಾಣ ನಿನ್ನದೊ ವ್ಯಾಸವಿಟ್ಠಲ ಗೋಪಾಲಕೃಷ್ಣ ॥
******
ಶ್ರೀಯರಸನೆ ಶೃಂಗಾರ ಗುಣಾಂಬುಧಿಮಾಯವರ್ಜಿತ ಮದನಕೋಟಿ ತೇಜತೋಯಜ ನಯನ ಸರ್ವ ಜಗದಂತರ್ಯಾಮಿ ಸುರ-ಗೇಯ ಜ್ಞಾನಾನಂದ ಕಾಯ ಕರುಣಿಹೇಯೋಪಾದೇಯ ರಹಿತ ಹೆಂಗಳ ಮೊರೆಯ ಕೇಳಿಕಾಯಿದ ಮಹಿಮ ಕಂಬು ಚಕ್ರಾಂಕಿತಆಯಾಸ ವರ್ಜಿತ ಅಜಭವಾದಿಗಳಿಗೆಸಾಯುಜ್ಯವಿತ್ತು ಸರ್ವ ಕಾಲದಲ್ಲಿನ್ಯಾಯದಿಂದಲಿ ಸ್ವಸ್ವಾನಂದವನುಣಿಸುತಪ್ರೀಯನೆಂದೆನಿಸುವ ಪ್ರೀತಿವಂತಾಓಯೆಂದು ಕೂಗಿ ನಿನಗೆ ಮಾತುಉಸುರುವೆ ಎಮ್ಮ ಗುರುರಾಯರಂತರಿಯಾಮಿ ರಘುನಂದನಹೇಯ ಕರ್ಮಗಳೆಂಬೊ ಹೆಬ್ಬುಲಿ ಬಲಿಗೆ ಸಿಲುಕಿಬಾಯ ಬಿಡುವೆನೊ ಸ್ವಾಮಿ ಭಕುತರೊಡಿಯಾಈಯವನಿಯೊಳಗೆ ಇದರಿಂದ ಉಳಿವ ಅನ್ಯೋ-ಪಾಯವೆಂಬೋದು ಕಾಣೆ ನಿನ್ನ ವಿನಃತಾಯಿ ತನ್ನ ಶಿಶುವು ತನಗೆ ಹರುಷವೆಂದುವಾಯು ಸಖ ತುಡಿಕೆ ನೋಡುವಳೆನ್ಯಾಯವೆ ಜಗದೊಳಗೆ ಅನಂತತಾಯಿಯಂದದಲಿಪ್ಪ ತಮ ವರ್ಜಿತಾಕಾಯಬೇಕೆನ್ನ ಕರ್ಮ ಕೆಳೆಗ್ಯಾದಿಗೆ ಸಾ-ಹಾಯವಾಗಿಪ್ಪ ಸತತ ನಿರ್ವಿಕಾರಪೇಯಪನನುಜ ನಮ್ಮ ವ್ಯಾಸವಿಠ್ಠಲ ಮುನಿಗೇಯ ಮುಕ್ತಾಶ್ರಯ ಮುಚಕುಂದ ವರದಾ 1
ಧ್ರುವತಾಳ
ಸಾಧನವಾವುದೊ ಸರ್ವ ಕಾಲದಲ್ಲಿಭೂದೇವಿ ರಮಣ ಭೂತಿವಂತ ಕೃಷ್ಣಮೇದಿನಿಯೊಳು ಪುಟ್ಟ ಮಿತಿಯಿಲ್ಲದ ಪಾಪಹಾದಿಯ ಪಿಡಿದು ಕೆಟ್ಟೆ ಹರಿಯೆ ಕೇಳೊಕ್ರೋಧ ಮೋಹ ಲೇಶ ಕೊರತೆ ಎಂಬುದು ಕಾಣೆಪಾದುಕ ಬಿಟ್ಟು ನಡೆದ ಪರಿಯಂತವೊಬಾಧೆ ಬಡುವೆನಯ್ಯ ಭವದೊಳು ಸಿಗಬಿದ್ದುಏ ದಯಾನಿಧಿಯೆ ಯದುಕುಲ ನಂದನಭೂದೇವ ತತಿಗಳಿಗೆ ಭಕುತಿಯಿಂದಲಿ ಅವರಪಾದಕೆ ಎರಗಿ ಪರಿ ಪರಿ ಸ್ತೋತ್ರವಮೋದದಿಂದಲಿ ಮಾಡಿ ಮೋಕ್ಷ ಮಾರ್ಗವ ಬೇಡದಾದೆ ಬಿಂಕವ ತಾಳಿ ಬಿರಿದಾಂಕನೆಸಾಧಿಸಿಕೊಂಡೆ ನಿರಯದಲ್ಲಿ ಕಷ್ಟಪಡುವ ಸಾಧನದ ಬಗೆಯನ್ನು ಸಂತೋಷದಿಆದರದಿಂದಲಿ ಆಪ್ತ ನೀನಾಗಿ ಪೂರ್ಣಬೋಧರ ಮತದಲ್ಲಿ ಪೊಂದಿಸಿರಲುಓದನದ ವಿದ್ಯವನ್ನು ಒಲಿಸುತ್ತ ಎನ್ನೊಳಗೆಕಾದುವೆ ಜನರ ಕೂಡ ಕಠಿಣದಲ್ಲಿಸಾಧು ಜನರ ವಚನ ಸರ್ವದಾ ಕೇಳಿ ಅನುಮೋದನ ಮಾಡದಲೆ ಮದದಿಂದಲಿವೇದ ಶಾಸ್ತ್ರವನೋಡಿ ವೈಜ್ಯದಿಂದಲಿಗಾದಿ ಮಜ್ಜನಗೈದೆ ಗರ್ವದಲ್ಲಿಆದಿ ಮೂರುತಿ ನಮ್ಮ ವ್ಯಾಸವಿಠಲ ಪಂಚಭೇದ ಮಾರ್ಗವ ಕಾಣದಾದೆ ಕರುಣಿ 1
ಮಟ್ಟತಾಳ
ಶಬ್ದಾದಿ ವಿಷಯ ಅಬ್ಧಿಯೊಳಗೆ ಮಹಾಹಬ್ಬಿದ ಕರಣಗಳು ದೊಬ್ಬಿ ದುಃಖ ಬಡುವ ಅಬ್ಬರವೇನೆಂಬೆ ಅನುಪಮ ಚರಿತನೆಹೆಬ್ಬುಲಿ ಎಂತಿಪ್ಪ ಹೆಚ್ಚಿದಹಂಕಾರದುರ್ಭಾಗ್ಯನ ಮಾಡಿ ದುಃಖದೊಳಿಡುವದುಕರ್ಬುರರ ಕಾಟ ಕಡಿಮೆಯೆಂಬುದೆಯಿಲ್ಲಾಅರ್ಬುದ ಜನ್ಮಕ್ಕೆ ಆರನಾ ಕಾಣದಾಅರ್ಭಕ ನಾನಯ್ಯ ಅನಿಮಿತ್ಯ ಬಂಧುಮಬ್ಬು ಕವಿಸದಿರು ಮನಸಿಜನಯ್ಯನೆಶಬ್ದಗೋಚರನೆ ವ್ಯಾಸವಿಠ್ಠಲ ದು-ಗ್ಧಾಬ್ಧಿಜ ಪತಿಯೆ ಪಾಪಭ್ರಾನಿಲನೆ 2
ತ್ರಿವಿಡಿತಾಳ
ದಾಮೋದರನಂತ ದಶರಥನಂದನರಾಮ ರಾಜ ತೇಜ ರಾಜೀವ ನಯನಮಾ ಮನೋಹರ ಮಧುಸೂದನ ನಿಜಭಕ್ತಸ್ತೋಮ ಪಾಲಕ ಪಾರತಂತ್ರ ರಹಿತಾವ್ಯೋಮಕೇಶನೊಡಿಯ ವ್ಯಾಪ್ತ ಮೂರ್ತಿ ಪೂರ್ಣಧಾಮ ಧಾರಕ ದೈತ್ಯ ಕುಲ ನಾಶನಸಾಮಜವರದ ಸಾಕಾರ ಸಾತ್ವಿಕ ಲ-ಲಾಮ ಲಕ್ಷಣವಂತ ಲಕ್ಷೀಕಾಂತಾಕಾಮಿತ ಜನ ಚಿಂತಾಮಣಿ ರಣರಂಗಭೀಮ ಭಯಂಕರ ಭೀತಿರಹಿತಾಭೂಮಿ ಭಾರಕ ದೈತ್ಯಾ ರಾಮ ಕುಠಾರ ಸುಖ ದುಃ-ಖಾಂಬುಧಿ ಸೂರ್ಯ ಕೋಟಿ ಪ್ರಕಾಶನೇಮವಿಲ್ಲದೆ ನಿನ್ನ ನಾಮಗಳನಂತಈ ಮಹಿಯೊಳಗುಂಟು ಈಶನೊಡಿಯಯಾಮ ಯಾಮಕೆ ಎನಗೆ ಎಲ್ಲಿದ್ದ ಕಾಲಕ್ಕುಸ್ವಾಮಿ ಪಾಲಿಸಬೇಕು ಜಿಹ್ವಾಗ್ರದಿಈ ಮಹಾ ಕಲಿಯುಗದೊಳಗಿಂಬಾವದು ಪಾಪಸ್ತೋಮ ಬತ್ತಿಸಿ ಮುಂದೆ ಗತಿ ಮಾರ್ಗಕ್ಕೆಶಾಮಸುಂದರ ಕಾಯಾ ವ್ಯಾಸವಿಠಲ ಕಾಯೊಪಾಮರ ಮನುಜನ್ನ ಪತಿತ ಪಾವನನೆ 3
ಅಟ್ಟತಾಳ
ಶತಕಲ್ಪವಾದರು ಇತರಾಲೋಚನೆಯಿಲ್ಲಾಮತಿಹೀನ ಜನರಿಗೆ ಯತನದಿಂದಲಿ ನೋಡೆಕ್ಷಿತಿ ಸುರ ಜನ್ಮ ವಿಹಿತವಾಗಿ ಬಂದರುಶ್ರುತಿ ಪುರಾಣಗಳಲ್ಲಿ ಚತುರನಾಗಿದ್ದರುಕ್ರತು ಮೊದಲಾದದ್ದು ವ್ರತಗಳಾಚರಿಸಲುಮತಿವಂತ ಜನರಿಗೆ ನತನಾಗಿ ಇದ್ದರುರತುನಾದಿ ಧನಗಳು ಮಿತಿಯಿಲ್ಲದಿತ್ತರುಸ್ವತಯೇವ ನಿತ್ಯ ಸದ್ಗತಿಗೆ ಕಾರಣನಲ್ಲಶತಧೃತಿ ಪಿತ ನಿನ್ನ ಹಿತವಾದ ನಾಮ ಸಂ-ಗತಿಯಾಗದಲೆ ಸಮ್ಮತವಾಗದೆಂದಿಗುಯತಿಗಳಾದರು ಮತಿಗೆ ತೋರುವದಿದೆಚ್ಯುತ ವಿದೂರನೆ ನಮ್ಮ ವ್ಯಾಸವಿಠಲ ನಿನ್ನಮತವಿದೆ ಮತವಿದೆ ರತಿಪತಿ ಜನಕಾ 4
ಆದಿತಾಳ
ಎನ್ನ ಯೋಗ್ಯತಾ ಗುರುಗಳಲ್ಲಿ ನೆಲಸಿಪ್ಪ ಸಂ-ಪನ್ನ ಮೂರುತಿಯೆ ಸರ್ವ ಜಗದಂತರ್ಯಾಮಿನಿನ್ನ ಪಾದವೆ ಗತಿ ನಿಖಿಳ ಬಗೆಯಿಂದಅನ್ಯರೊಬ್ಬರ ಕಾಣೆ ಆವಲ್ಲಿ ನೋಡಿದರು ಎನ್ನ ಪಾಲಿಸುವರ ಯದು ಕುಲೋತ್ತಮ ಕೃಷ್ಣಅನ್ಯಾಯ ನಡತೆಗಳು ಆಚರಿಸಿದೆನಯ್ಯಾಅನ್ನಂತ ಬಗೆಯಿಂದ ಅತಿ ನಿರ್ಭೀತನಾಗಿಎನ್ನಪರಾಧಗಳು ಎಣಿಸಿದರಾಗೆ ಹರಿಯೆಇನ್ನಾವ ಗತಿ ಕಾಣೆ ಇಹಪರದಲ್ಲಿ ಸಿದ್ಧಬನ್ನ ಬಡುವದೆ ಸರಿ ಬಹುಕಾಲ ನರಕದಲ್ಲಿ ಅನಾಥ ಬಂಧುವೆ ಅತಿ ದಯಾಪರ ಮೂರ್ತಿಘನ್ನ ಪತಿತ ಪಾವನ್ನ ಘನ್ನ ಭವಾಂಬುಧಿ ನಾವಇನಿತು ಬಿರಿದು ಉಳ್ಳ ಇಭರಾಜ ವರದನೆನಿನ್ನ ಮೊರೆ ಬಿದ್ದೆ ಎನ್ನ ಮರೆಯದಿರುಅನಾಥ ಬಂಧು ದೇವ ವ್ಯಾಸವಿಠಲರೇಯಾನಿನ್ನ e್ಞÁನವ ಕೊಟ್ಟು ನಿರ್ಭೀತನ ಮಾಡೊ 5
ಜತೆ
ಯೇನಮ್ಮೋಚಯಾಮಿ ಎಂಬೊ ಇಚ್ಛೆಯು ಒಂದೆಕಾಣಿಸುವದು ಸಾಧನ ವ್ಯಾಸವಿಠ್ಠಲ ಎನಗೆ ||
************