Showing posts with label ತಾಯಿ ಈ ಲೋಕಕ್ಕೆ shree krishna ankita suladi ಉಪಾಸನಾ ಸುಳಾದಿ TAAYI EE LOKAKKE UPAASANA SULADI. Show all posts
Showing posts with label ತಾಯಿ ಈ ಲೋಕಕ್ಕೆ shree krishna ankita suladi ಉಪಾಸನಾ ಸುಳಾದಿ TAAYI EE LOKAKKE UPAASANA SULADI. Show all posts

Sunday 8 December 2019

ತಾಯಿ ಈ ಲೋಕಕ್ಕೆ shree krishna ankita suladi ಉಪಾಸನಾ ಸುಳಾದಿ TAAYI EE LOKAKKE UPAASANA SULADI


Audio by Mrs. Nandini Sripad

ಶ್ರೀ ವ್ಯಾಸರಾಯ ವಿರಚಿತ ಸುಳಾದಿಗಳು


ಉಪಾಸನಾ ಸುಳಾದಿ

ರಾಗ ಕಾಪಿ

ಧ್ರುವತಾಳ

ತಾಯಿ ಈ ಲೋಕಕ್ಕೆ ಶ್ರೀಹರಿ 
ಕಾಯದಿಂ ಜಗವಂ ಆದಿಯೋಳಿಟ್ಟನಾಗಿ
ತಂದೆ ಈ ಲೋಕಕ್ಕೆ ಶ್ರೀಹರಿ 
ಅಂದೆ ಬೊಮ್ಮಾದಿಗಳ ಸೃಜಿಸಿದವನಾಗಿ
ಒಡಿಯಾ ಈ ಲೋಕಕ್ಕೆ ಶ್ರೀಹರಿ
ಬಿಡದೆ ರಾಮಾದಿ ರೂಪದಿಂ ಪೊರೆವನಾಗಿ
ಈಶ ಈ ಲೋಕಕ್ಕೆ ಶ್ರೀಹರಿ
ವ್ಯಾಸಾದಿ ರೂಪದಿ ಜ್ಞಾನವ ನೀವನಾಗಿ
ಪರತತ್ವ ಈ ಲೋಕಕ್ಕೆ ಶ್ರೀಹರಿ ಶ್ರೀ -
ವರ ಮುಕುತಿಯನೊಬ್ಬ ನೀವನಾಗಿ 
ಗತಿ ಈ ಲೋಕಕ್ಕೆ ಶ್ರೀಹರಿ ಶ್ರೀ -
ಪತಿ ತನ್ನ ನೆನೆವರಿಗಭಯವ ನೀವನಾಗಿ
ದೈವ ಈ ಲೋಕಕ್ಕೆ ಶ್ರೀಹರಿ 
ಸೇವ್ಯನಾಗಿ ತಮ್ಮ ತಮ್ಮ ಧರ್ಮಗಳಿಂದ 
ಸರ್ವ ಈ ಲೋಕಕ್ಕೆ ಶ್ರೀಹರಿ
ಶ್ರೀಕೃಷ್ಣನೋರ್ವನು ಸರ್ವ ವ್ಯಾಪಕನಾಗಿ
ತಾಯಿ ಈ ಲೋಕಕ್ಕೆ ಶ್ರೀಹರಿ ॥ 1 ॥

ಮಠ್ಯತಾಳ


ಪತಿ ಎಂದುಪಾಸ್ಯ ಪಯೋಧಿಸುತೆಗೆ
ಪಿತನೆಂದುಪಾಸ್ಯ ಪದುಮಜಂಗೆ
ಶ್ವಶುರನೆಂದುಪಾಸ್ಯ ಸರಸ್ವತಿಗೆ
ಪಿತಾಮಹನೆಂದುಪಾಸ್ಯ ಪಿನಾಕಧರಗೆ

ಸ್ವಾಮಿ ಎಂದುಪಾಸ್ಯ ಸರ್ವರಿಗೆ ಶ್ರೀಕೃಷ್ಣ 
ಆ ಮಹಾತ್ಮಗುಪಾಸ್ಯ ಉಗ್ರಸೇನ ಗಡಾ ॥ 2 ॥

ರೂಪಕತಾಳ

ಸರಸಿಜಾಕ್ಷನು ವಿರಿಂಚಿಗೆ ಗುರು
ಪುರಹರನಿಗೆ ಪರಮಗುರು ಮಿಕ್ಕ
ಸುರತತಿಗೆಲ್ಲ ಆದಿ ಗುರು
ನರೋತ್ತಮರಿಗೆಲ್ಲ ಮೂಲ ಗುರು
ಪರದೈವ ಶ್ರೀಕೃಷ್ಣಗೆ ಗುರುವಾದಾ ಸಾಂದೀಪ ಗಡಾ ॥ 3 ॥

ಝಂಪೆತಾಳ

ಶೋಕಾದಿ ದೋಷ ಅತಿದೂರನೆಂಬ ಜ್ಞಾ -
ನೈಕರಸ ದಿವ್ಯ ಮೂರುತಿ ಎಂಬಾ
ಲೌಕಿಕಾನಂದಾಮಂದ ಸಾಂದ್ರವೆಂಬಾ

ಸಾಕುವದೀ ಎನ್ನ ಸ್ವಾಮಿ ಎಂದೆಂಬಾ ಈ
ನಾಲ್ಕು ವಿಧದ ಉಪಾಸ್ಯವಿಲ್ಲದವಗೆ
ಶ್ರೀಕೃಷ್ಣ ತನ್ನ ಮೂರುತಿಯ ತೋರ ॥ 4 ॥


ಏಕತಾಳ

ಎಡರುಗಳೆಲ್ಲವು ಆಡಸಿದಡಂ
ಪತ್ತುಗಳೆಲ್ಲವು ಓಡಿದಡಂ
ವ್ಯಾಧಿಗಳೆಲ್ಲವು ಬಾಧಿಸಿದಡಂ
ಶೋಕಗಳೆಲ್ಲವು ಮುಖಗಟ್ಟಿದೊಡಂ
ಶ್ರೀಕೃಷ್ಣ ಪೂರ್ಣಗುಣ ಸ್ವಾಮಿ ಎಂಬ
ಏಕಾಂತ ಉಪಾಸ್ಯ ಮರಿಯದಿರೆ ॥ 5 ॥

ಜತೆ

ಶ್ರವಣಾದಿಗಳೊಂದು ಕ್ಷಣವ ಬಿಡದೆ ಮಾಡು
ಭವರೋಗ ವೈದ್ಯ ಶ್ರೀಕೃಷ್ಣನ ಚಿತ್ತವ ಪಡೆವರೆ ॥
*******

to check

another version


ಶ್ರೀ ವ್ಯಾಸರಾಜ ವಿರಚಿತ   ಪ್ರಮೇಯಭಾಗ ಸುಳಾದಿ 

 ವ್ಯಾಪ್ತಿ ಸುಳಾದಿ 

 ರಾಗ ಆನಂದಭೈರವಿ 

 ಧ್ರುವತಾಳ 

ತಂದೆಯಾಗಿ ತಾಯಿಯಾಗಿ 
ಇಂದಿರೇಶನೆ ಎನಗೆ ಬಂಧುವಾಗಿ ಬಳಗವಾಗಿ 
ಸೇವ್ಯನಾಗಿ ತಮ್ಮ ತಮ್ಮ ಧರ್ಮಗಳಿಂದ 
ಸರ್ವ ಈ ಲೋಕಕ್ಕೆ ಶ್ರೀಹರಿ 
ಶ್ರೀಕೃಷ್ಣ ನೋರ್ವನು ಸರ್ವ ವ್ಯಾಪಕನಾಗಿ 
ತಾಯಿ ಈ ಲೋಕಕ್ಕೆ ಶ್ರೀಹರಿ ॥ 1 ॥

 ಮಟ್ಟತಾಳ 

ಪತಿ ಎಂದುಪಾಸ್ಯ ಪಯೋಧಿಸುತೆಗೆ 
ಪಿತನೆಂದುಪಾಸ್ಯ ಪದುಮಜಂಗೆ 
ಶ್ವಶುರನೆಂದುಪಾಸ್ಯ ಸರಸ್ವತಿಗೆ 
ಪಿತಾಮಹನೆಂದುಪಾಸ್ಯ ಪಿನಾಕಧರಗೆ 
ಸ್ವಾಮಿ ಎಂದುಪಾಸ್ಯ ಸರ್ವರಿಗೆ ಶ್ರೀಕೃಷ್ಣ 
ಆ ಮಹಾತ್ಮಗುಪಾಸ್ಯ ಉಗ್ರಸೇನ ಗಡಾ ॥ 2 ॥

 ರೂಪಕತಾಳ 

ಸರಸಿಜಾಕ್ಷನು ವಿರಿಂಚಿಗೆ ಗುರು 
ಪುರಹರನಿಗೆ ಪರಮ ಗುರು 
ಮಿಕ್ಕ ಸುರತತಿಗೆಲ್ಲ ಆದಿ ಗುರು 
ನರೋತ್ತಮರಿಗೆಲ್ಲ ಮೂಲ ಗುರು 
ಪರದೈವ ಶ್ರೀಕೃಷ್ಣಗೆ ಗುರುವಾದಾ ಸಾಂದೀಪ ಗಡಾ ॥ 3 ॥

 ಝಂಪೆತಾಳ 

ಶೋಕಾದಿ ದೋಷ ಅತಿದೂರನೆಂಬಾ ಜ್ಞಾ - (ಸತು)
ನೈಕ ರಸ ದಿವ್ಯ ಮೂರುತಿ ಎಂಬಾ (ಚಿತು)
ಲೌಕಿಕಾನಂದಾಮಂದ ಸಾಂದ್ರವೆಂಬಾ (ಆನಂದಾ)
ಸಾಕುವದೀ ಎನ್ನ ಸ್ವಾಮಿ ಎಂದೆಂಬಾ (ಆತ್ಮ)
ಈ ನಾಲ್ಕು ವಿಧ ಉಪಾಸ್ಯವಿಲ್ಲದವಗೆ 
 ಶ್ರೀಕೃಷ್ಣ ತನ್ನ ಮೂರುತಿಯೆ ತೋರ ॥ 4 ॥

 ಏಕತಾಳ 

ಎಡರುಗಳೆಲ್ಲವು ಆಡಿಸಿದಡಂ
ಪತ್ತುಗಳೆಲ್ಲವು ಓಡಿದಡಂ
ವ್ಯಾಧಿಗಳೆಲ್ಲವು ಬಾಧಿಸಿದಡಂ 
ಶೋಕಗಳೆಲ್ಲವು ಮುಖಗಟ್ಟಿದೊಡಂ
 ಶ್ರೀಕೃಷ್ಣ ಪೂರ್ಣಗುಣ ಸ್ವಾಮಿ ಎಂಬ
ಏಕಾಂತ ಉಪಾಸ್ಯ ಮರಿಯದಿರೆ ॥ 5 ॥

 ಜತೆ 

ಶ್ರವಣಾದಿಗಳೊಂದು ಕ್ಷಣವ ಬಿಡದೆ ಮಾಡು 
ಭವರೋಗ ವೈದ್ಯ ಶ್ರೀಕೃಷ್ಣನ ಚಿತ್ತವ ಪಡೆವರೆ ॥

********