ankita ನಾಗಶಯನವಿಠಲ
ಮಂತ್ರಾಲಯವಾಸ ಶ್ರೀ ರಾಘವೇಂದ್ರ ಪ
ಮಂತ್ರತಂತ್ರಾನಂತ ಮರುತಾಂತರ್ಗತಪ್ರೀಯ ಅ. ಪ
ಭೂತ ಪ್ರೇತ ಕಳೆದು ಶ್ರೀಪತಿ ಒಲುಮೆಯ
ಸತತ ಪೊಂದಿ ನೀನು ಕರುಣಾಳು ಎಂದೆನಿಸಿ
ಪಾತಕಹರ ವಾಯುವಾಂತರ್ಗತನನೂ ಚಂದದಿ
ತುತಿಸಿ ನೀ ಮೆರೆದೆಯೊ ಕ್ಷಿತಿಯೊಳು
ತುತಿಸೆ ನಿನ್ನನು ಭಕುತ ವೃಂದವು
ಮಿತಿಯು ಇಲ್ಲದೆ ವರಗಳೀಯುತ
ಖ್ಯಾತಿ ಪಡುತಿಹೆ ಕ್ಷಿತಿಯೊಳಗೆ
ಪ್ರತಿದಿನದಿ ಸಿರಿಪತಿಯ ಕರುಣದಿ 1
ಮಂಗಳ ದ್ವಿತಿಯ ಬಹುಳ ಶ್ರಾವಣದಲ್ಲಿ
ಪೊಂದಿ ರಂಗನ ಸಂಗ ನಿಂದೆ
ಡಿಂಗರ ಪ್ರೀಯ ಅಂದು ಇಂದು ಮುಂದು
ಸಂತ ವೃಂದವು ನಿನ್ನ ಹಿಂದು ಮುಂದು ನಿಂದು
ಕಂಬು ಕೊಂಬನು ಊದೆ
ಮಿಂದು ಸಂತತ ಶರಧಿಯೊಳು ನಿ-
ರಂತರದಿ ಸಂಗೀತ ಪೇಳುತ ಚಂದದಲಿ ಅ-
ಲಂಕೃತರಂತರ್ಗತ ಗುರುವೆ ನಿನ್ನನು ಭಜಿಸುತಿಹರು 2
ಸುರಪನಾಲಯವೆಂದು ಧರೆಯೊಳ್ ಈ ಕ್ಷೇತ್ರವು
ಗುರು ನಿನ್ನ ಪ್ರಭೆಯೊಳು ಖ್ಯಾತಿ ಪೊಂದಿತು ಇನ್ನು
ಪರಮ ದಾಸರು ನಿನ್ನ ಪರಿ ಪರಿ ತುತಿಸುತ
ತ್ರಿಜಗದೊಳ್ ನಿನ್ನಯ ಕೀರ್ತಿ ಸಾರ್ದರು
ಗುರುವೆ ಸ್ಮರಿಸಲ್ನರರ್ನಿನ್ನ ಭವದ
ಶರಧಿಯೊಳ್ ಹರಿಯ ಸ್ಮರಣೆಯ
ನೆರವನೀನಿತ್ತು ನಾಗಶಯನ(ವಿಠಲ) ಪೂರ್ಣ ನೋಟದಿ
ಹರಿಯುವಿಯೊ ಕರೆಕರೆಯ ಪಾಶವ 3
****