by ಪ್ರಸನ್ನವೆಂಕಟದಾಸರು
ವಾಯುದೇವರು
ಎಣೆಗಾಣೆ ಭುವನದಿ ಶ್ರೀರಾಮಚಂದ್ರನ ಪ್ರಿಯವೀರಹನುಮ ಘನಧೀರ ಪ.
ಬ್ರಹ್ಮ ಪಿತೃ ಪಾದಕ್ಕೆರಗಿ ಉಮ್ಮಯದಿ ಕೊಂಡಾಜೆÕಸಮನೆಶರಧಿಗೋಷ್ಪದ ಮಾಡಿ ಹೋಗ್ಯಮ್ಮ ಜಾನಕಿಗೆ ಪರಬೊಮ್ಮನುಂಗುರವಿತ್ತುಹಮ್ಮಿನ ನಿಶಾಚರನಿಗುಮ್ಮಳಿಕೆನಿತ್ತೆ 1
ಕ್ರೀಡೆಯಿಂ ದಶಶಿರನನೊಡೆವನಾಯದೆ ಶಿಥಿಲಮಾಡುವನಾಗಿನಾ ಮಾತನಾಡಿ ರಮೆಯಚೂಡಾಮಣಿಯ ತಂದು ನೀಡಿ ರಾಘವಗೆ ಸುಖಮಾಡಿಸಿದೆ ಅಪ್ರತಿಮಾರುತಿ ಅತಿಧೀರ 2
ಗರುವಿನ ಖಳನ ವನದತರುವಿಟಪಮೂಲಸಹಮುರಿದು ಕರಚರಣದಿ ತಂದಾನೆರದ ರಿಪುರಕ್ಕಸರ ತರಿ ತರಿದು ಮರಲುಂದಿ ರಭಸದಿಂದಸುರಪುರವನುರುಹಿದೆ 3
ಕದನಕರ್ಕಶರಿಪುಗಳೆದೆಯೊದೆದು ಕೋಟಿ ಸಿಂಹದ ರಭಸದಿನಲ್ಲಿ ಬಿಸುಟಿ ಉದಧಿಯಲ್ಲಿಸುದುರ್ಲಭಾದ ನಾಕೌಷಧವ ತಂದು ರಣದಿ ಮಲಗಿದ ವೀರರಸುಗಾಯಿದೆ ಅದ್ಭುತ ಮಹಿಮ 4
ಸೀತಾಪತಿಯ ಪ್ರೀತಿಯತ್ಯಾದರದಿ ಪಡೆದು ವಿಷಯಾತೀತನಾಗಿ ವಿಧಾತನಾದೆವಾತಜಾತನೆ ನಿಮ್ಮ ಖ್ಯಾತಿಯ ಹೊಗಳಲಳವೆನಾಥ ಪ್ರಸನ್ನವೆಂಕಟ ದಾತನಿಗೆ ದೂತ 5
*******