Showing posts with label ಶಿರಬಾಗಿ ಬೇಡ್ವೆ ಎನ್ನನು ಪೊರೆಯೋ ಹರಿಯೇ hanumesha vittala. Show all posts
Showing posts with label ಶಿರಬಾಗಿ ಬೇಡ್ವೆ ಎನ್ನನು ಪೊರೆಯೋ ಹರಿಯೇ hanumesha vittala. Show all posts

Tuesday, 1 June 2021

ಶಿರಬಾಗಿ ಬೇಡ್ವೆ ಎನ್ನನು ಪೊರೆಯೋ ಹರಿಯೇ ankita hanumesha vittala

ಶಿರಬಾಗಿ ಬೇಡ್ವೆ ಎನ್ನನು ಪೊರೆಯೋ ಹರಿಯೇ

ಶರಣ ರಕ್ಷಕನೆಂಬೊ ಬಿರುದುಳ್ಳ ದೊರೆಯೇ ಪ


ಘನಮಹಿಮನೇ ನಿನ್ನ ಪಾವನ ಚರಣಕಮಲ ಎಂಬೋ

ಮನವ ಆಕರ್ಷಿಸುವ ಪಂಜರದಲಿ

ವನಜನಾಭನೆ ಎನ್ನ ಮನವೆಂಬ ರಾಜಹಂಸ

ನನ್ನ ಲೋಲ್ಯಾಡಿಸೋ ಅನುದಿನದಲಿ 1


ಇಂದಿನ ದಿನವೇ ಸ್ಮøತಿಯಿಂದ ಇರುವಾಗ ಮು-

ಕುಂದ ತವ ಸ್ಮರಿಸುವೆÉ ಕೊಡು ಮೋಕ್ಷವಾ

ಮುಂದೆ ಅಂತ್ಯದಲಿ ಕಫ ಪಿತ್ತ ಶೀತಾದಿ ಕಂಠ

ಗುಂದಿ ವಿಸ್ಮøತಿಯಾಗಿ ಸ್ಮರಣವಹುದೈಯ್ಯಾ 2


ಶ್ರೀಶ ಹನುಮೇಶವಿಠಲನೇ ನಿನ್ನಾಧೀನ

ದಾಸನ ಮನದಪೇಕ್ಷವ ಪೂರಿಸೋ

ಕೇಶವನೆ ಶಾಸಕನೆಂದು ಆಶಿಸಿ ಬಂದೆ

ಬೇಸರ ಮಾಡದಲೆ ಪೋಷಿಸೈ ಸ್ವಾಮಿ 3

****