Showing posts with label ಕಂಬುಕಂಧರ ಸತತ ಬಿಡದೆ ರಕ್ಷಿಸಂಬು shyamasundara ಸತ್ಯನಾರಾಯಣ ಕಥೆ. Show all posts
Showing posts with label ಕಂಬುಕಂಧರ ಸತತ ಬಿಡದೆ ರಕ್ಷಿಸಂಬು shyamasundara ಸತ್ಯನಾರಾಯಣ ಕಥೆ. Show all posts

Saturday, 1 May 2021

ಕಂಬುಕಂಧರ ಸತತ ಬಿಡದೆ ರಕ್ಷಿಸಂಬು ankita shyamasundara ಸತ್ಯನಾರಾಯಣ ಕಥೆ

 ಶ್ರೀ ಸತ್ಯನಾರಾಯಣ ಕಥೆ ( ಕನ್ನಡ ಪದ್ಯ ರೂಪ )

ಕಂಬು ಕಂಧರ ಸತತ ಬಿಡದೆ ರಕ್ಷಿ

ಸಂಬೋಜೋಧ್ಭವನ ತಾತ ಪ


ಜಂಭಾರಿ ವೈರಿಕುಲಾಂಬುಧಿ ಕುಂಭಜ

ಕುಂಭಿಣಿಸುರ ನಿಕÀರುಂಬ ಪೋಷಕದೇವ ಅ.ಪ

ನಳಿನಾಕ್ಷ ನರಕೇಸರಿ ನಂಬಿದೆ ನಿನ್ನ |

ಹಲಧರಾನುಜ ಶೌರಿ ||

ಇಳಿಜದಾಯಕ ಸಿರಿ | ನಿಲಯ ನಿತ್ಯಾನಂದ

ಎಲರುಣಿ ವರಶಾಯಿ ಕಲುಷಸಂಹಾರಕ

ಜಲದರಿಪುವಿನ ತನಯಾನನುಜನ

ಕಲಹದೊಳು ಜೈನಿದನ ತಾತನ

ಕುಲವಿರೋಧಿಯ ಧ್ವಜನ ಜನಕಗೆ

ಒಲಿದು ಬೆಂಬಲನಾದ ಕೇಶವ 1


ನಿಗಮ ರಕ್ಷಕ ಕೂರ್ಮಕೀಟ ಮಾನವ

ಮೃಗವಟು ಪರಶುರಾಮ

ಅಗಜೇಶ ಶರಕಾಲ | ನಗಪತಿ ವರದನೆ

ಅ(ಗ)ಗಜರಾಜನ ಮಗಳಿಗೋಸುಗ

ನಗುತ ಮಡದಿಯನಗಲಿ ಬಂದು

ಜಗದಿ ಪೊತ್ತನ ನಗದಿ ನೆಲಸಿದ

ತ್ರಿಗುಣ ವರ್ಜಿತ ಖಗವರೂಧನೆ 2


ಮಂದರೋದ್ಧರ ವಿಶಾಲಮಹಿಮನಾದ

ಸಿಂಧೂರ ಪರಿಪಾಲ |

ಕಂದರ್ಪಪಿತ ಶಾಮಸುಂರವಿಠಲನೆ

ವಂದಿಸುವೆನು ಎನ್ನ | ಬಂಧನ ಬಿಡಿಸಯ್ಯ

ಗಂಧವಾಹನವೀಂದ್ರ ಫಣಿ ಪತಿ

ಸಿಂಧುಜೋಧ್ಭವೆ ಪತಿ ವಿರೋಧಿ | ಪು

ರಂದರಾರ್ಯರ ವೃಂದ ವಂದಿತ

ನಂದ ಸುತ ಗೋವಿಂದ ಗೋಪತಿ 3


***


ರಾಗ : ರೇಗುಪ್ತಿ  ತಾಳ : ತ್ರಿವಿಡ 


ಕಂಬುಕಂಧರ ಸತತ ಬಿಡದೆ । 

ರಕ್ಷಿ ।ಸಂಬುಜೋದ್ಭವನ ತಾತ ।। ಪಲ್ಲವಿ ।।

ಜಂಭಾರಿ ವೈರಿಕುಲಾಂಬುಧಿ 

ಕುಂಭಜ ।

ಕುಂಭಿಣಿ ಸುರ ನಿಕರಂಬ 

ಪೋಷಕ ದೇವ ।। ಆ. ಪ ।।


ನಳಿನಾಕ್ಷ ನರಕೇಶರಿ 

ನಂಬಿದೆ ನಿನ್ನ ।

ಹಲಧರಾನುಜನೆ ಶೌರಿ ।

ಇಳಜದಾಯಕ ಸಿರಿ ।

ನಿಲಯ ನಿತ್ಯಾನಂದ ।

ಎಲರುಣಿ ವರಶಾಯಿ ।

ಕಲುಷ ಸಂಹಾರಕ ।

ಜಲದ ರಿಪುವಿನ 

ತನಯನನುಜನ ।

ಕಲಹದೊಳು 

ಜೈಸಿದನ ತಾತನ ।

ಕುಲ ವಿರೋಧಿಯ ಧ್ವ

ಜನ ಜನಕಗೆ ।

ಒಲಿದು ಬೆಂಬಲನಾದ 

ಕೇಶವ ।। ಚರಣ ।।

ನಿಗಮರಕ್ಷಕ ಕೂರ್ಮ 

ಕಿಟ ಮಾನವ -

ಮೃಗ ವಟು ಪರಶುರಾಮ ।

ಅಗಜೇಶ ಶರಕಾಲ ।

ನೃಗಪತಿ ವರದನೆ ।

ಗಗನರಾಜನ ಮಗಳ 

ಗೋಸುಗ ।

ನಗುತ ಮಡದಿಯನಗಲಿ 

ಬಂದು ।

ಜಗವ ಪೊತ್ತನ 

ನಗದಿ ನೆಲೆಸಿದ ।

ತ್ರಿಗುಣ ವರ್ಜಿತ 

ಖಗವರೂಢನೆ ।। ಚರಣ ।।


ಮಂದರೋದ್ಧರ ವಿಶಾಲ 

ಮಹಿಮನಾದ ।

ಸಿಂಧೂರ ಪರಿಪಾಲ ।

ಕಂದರ್ಪ ಪಿತ 

ಶ್ಯಾಮಸುಂದರ ವಿಠಲನೆ ।

ವಂದಿಸುವೆನು ಯೆನ್ನ 

ಬಂಧನ ಬಿಡಿಸಯ್ಯ ।

ಗಂಧವಾಹನ ವೀಂದ್ರ

ಫಣಿಪತಿ ।

ಸಿಂಧುಜೋದ್ಭವೆಪತಿವಿರೋಧಿ । 

ಪು ।ರಂದರಾಮರ 

ವೃಂದ ವಂದಿತ ।

ನಂದಸುತ ಗೋವಿಂದ 

ಗೋಪತಿ ।। ಚರಣ ।।

****

ವಿವರಣೆ-ಆಚಾರ್ಯ ನಾಗರಾಜು ಹಾವೇರಿ,ಗುರು ವಿಜಯ ಪ್ರತಿಷ್ಠಾನ

ಕಂಬುಕಂಧರ = ಶಂಖದಂಥಹ ಕೊರಳುಳ್ಳವ 

ಜಂಭಾರಿ ವೈರಿ = ಇಂದ್ರಜಿತ್ 

ಇಳಿಜ = ಭೂಮಿಪುತ್ರ ಮಂಗಳ 

ಜಲದ ರಿಪುವಿನ = ಮೇಘಗಳ ಶತ್ರುವಾದ ಶ್ರೀ ವಾಯುದೇವರ 

ತನಯನ = ಮಗನಾದ ಶ್ರೀ ಭೀಮಸೇನದೇವರ 

ಅನುಜನ = ತಮ್ಮನಾದ  ಅರ್ಜುನನ 

ಕಲಹದೊಳು ಜೈಸಿದನ = ಯುದ್ಧದಲ್ಲಿ ಗೆದ್ದ ಬಬ್ರುವಾಹನ 

ತಾತನ = ತಾಯಿಯ ತಂದೆಯಾದ ಹಾವಿನ 

" ಕುಲ ವಿರೋಧಿ ಧ್ವಜನ "

ವಂಶಕ್ಕೆ ಶತ್ರುವಾದ ನವಿಲನ್ನೇ ಧ್ವಜವಾಗಿ ಉಳ್ಳ ಷಣ್ಮುಖನ 

ಜನಕಗೆ = ಶ್ರೀ ರುದ್ರದೇವರಿಗೆ 

ನಿಗಮರಕ್ಷಕ = ಶ್ರೀ ಮತ್ಸ್ಯ ರೂಪಿ ಶ್ರೀ ಹರಿ 

ಕಿಟ = ಶ್ರೀ ವರಾಹದೇವರು 

ಅಗಜೆ  = ಪಾರ್ವತಿಯ 

ಈಶ = ಪತಿಯಾದ ಶ್ರೀ ಮಹಾರುದ್ರದೇವರ 

ಶರ = ಧನಸ್ಸಿಗೆ 

" ಕಾಲ ನೃಗಪತಿ ವರದನೆ "

ಕಾಲ ಯಮನಂತೆ ಇರುವ ಶ್ರೀ ಮೂಲರಾಮಚಂದ್ರದೇವರು 

ಗಗನರಾಜ = ಆಕಾಶರಾಜ 

ಮಗಳ = ಪದ್ಮಾವತಿಯ 

 ಮಡದಿಯನಗಲಿ = ಶ್ರೀ ಮಹಾಲಕ್ಷ್ಮೀಯನ್ನು ಬಿಟ್ಟು 

" ಜಗವ ಪೊತ್ತನ ನಾಗದಿ ನೆಲೆಸಿದ "

ವರಾಹ ರೂಪಿ ಶ್ರೀ ಹರಿ ವಾಸವಾದ ಬೆಟ್ಟದಲ್ಲಿ ನೆಲೆಸಿದ ಶ್ರೀನಿವಾಸ 

ಸಿಂಧೂರ ಪರಿಪಾಲ = ಗಜೇಂದ್ರನನ್ನು ರಸಖಿಸಿದ 

ಕಂದರ್ಪ ಪಿತ = ಮನ್ಮಥನ ತಂದೆಯಾದ 

" ಶ್ಯಾಮಸುಂದರ ವಿಠಲನೇ"

ಯೆನ್ನ ಬಿಂಬ ಶ್ರೀ ಶ್ಯಾಮಸುಂದರವಿಠಲೋsಭಿನ್ನ  ಶ್ರೀ ಶ್ರೀನಿವಾಸನೆ 

ವಂದಿಸುವೆನು = ನಮಸ್ಕರಿಸುವೆನು.

****

ರಾಗ : ರೇಗುಪ್ತಿ ತಾಳ ತ್ರಿವಿಡಿ


ಕಂಬುಕಂಧರ ಸತತ ಬಿಡದೆ । ರಕ್ಷಿ ।

ಸಂಬುಜೋದ್ಭವನ ತಾತ ।

ಜಂಭಾರಿ ವೈರಿ ಕುಲಾಂಬುಧಿ ಕುಂಭಜ ।

ಕುಂಭಿಣಿ ಸುರಾ ನಿಕುರಂಬ ಪೋಷಕ ದೇವಾ ।। ಪಲ್ಲವಿ ।।


ನಳಿನಾಕ್ಷ ನರಕೇಸರಿ ನಂಬಿದೆ ನಿನ್ನ ।

ಹಲಧರಾನುಜನೆ ಶೌರಿ ।

ಇಳಿಜದಾಯಕ ಸಿರಿ ನಿಲಯ ನಿತ್ಯಾನಂದ ।

ಎಲರುಣಿ ವರಶಾಯಿ ಕಲುಷ ಸಂಹಾರಕ ।।

ಜಲದರಿಪುವಿನ ತನಯನನುಜನ ।

ಕಲಹದೊಳು ಜೈಸಿದನ ತಾತನ ।

ಕುಲ ವಿರೋಧಿಯ ಧ್ವಜನ ಜನಕಗೆ ।

ಒಲಿದು ಬೆಂಬಲವಾದ ಕೇಶವ ।। ಚರಣ ।।


ನಿಗಮ ರಕ್ಷಕ ಕೂರ್ಮ ಕಿಟ ಮಾನವ ।

ಮೃಗ ವಟು ಪರಶುರಾಮ ।

ಅಗಜೇಶ ಶರಕಾಲ ನೃಗಪತಿ ವರದನೆ ।

ವಿಗತ ವಸನ ಕಲ್ಕಿ ಅಗಣಿತ ಮಹಿಮನೆ ।।

ಗಗನ ರಾಜನ ಮಗಳ ಗೋಸುಗ ।

ನಗುತ ಮಡದಿಯನಗಲಿ ಬಂದು ।

ಜಗವ ಪೊತ್ತನ ನಗದಿ ನೆಲೆಸಿದೆ ।

ತ್ರಿಗುಣ ವರ್ಜಿತ ಖಗವರೂಢನೆ ।। ಚರಣ ।।


ಮಂದರೋದ್ಧರ ವಿಶಾಲ ಮಹಿಮನಾದ ।

ಸಿಂಧೂರ ಪರಿಪಾಲ ।

ಕಂದರ್ಪ ಪಿತ ಶ್ಯಾಮಸುಂದರವಿಠಲನೆ ।

ವಂದಿಸುವೆನು ಎನ್ನ ಬಂಧನ ಬಿಡಿಸಯ್ಯ ।।

ಗಂಧವಾಹನ ವೀಂದ್ರ ಫಣಿಪತಿ ।

ಸಿಂಧುಜೋದ್ಭವೆಪತಿ ವಿರೋಧಿ । ಪು ।

ರಂದರಾಮರ ವೃಂದ ವಂದ್ಯ ।

ನಂದಿಸುತ ಗೋವಿಂದ ಗೋಪತಿ ।। ಚರಣ ।।

***