Showing posts with label ವನಜ ಮುಖಿಯರ ಮನದಿಷ್ಟಾರ್ಥವನೀವನ ಶ್ರೀ ಕೃಷ್ಣ neleyadikeshava. Show all posts
Showing posts with label ವನಜ ಮುಖಿಯರ ಮನದಿಷ್ಟಾರ್ಥವನೀವನ ಶ್ರೀ ಕೃಷ್ಣ neleyadikeshava. Show all posts

Wednesday 1 September 2021

ವನಜ ಮುಖಿಯರ ಮನದಿಷ್ಟಾರ್ಥವನೀವನ ಶ್ರೀ ಕೃಷ್ಣ ankita neleyadikeshava

 ..

ವನಜ ಮುಖಿಯರ ಮನದಿಷ್ಟಾರ್ಥವನೀವನ - ಶ್ರೀ ಕೃಷ್ಣ ಎನ್ನಿರೊಮನು ಮುನಿಜನರನು ಅನುದಿನದೊಳು ಪೊರೆವನ - ಶ್ರೀ ಕೃಷ್ಣ ಎನ್ನಿರೊ ಪ


ಪಣ್ಣ ಕೊಯ್ದನನುಜಗೆ ಸಹಾಯನಾದನ _ ಶ್ರೀ ಕೃಷ್ಣ ಎನ್ನಿರೊಸಣ್ಣ ಸೀರೆಯ ನಲ್ವೆಣ್ಣು ರೂಪಾದನ _ ಶ್ರೀ ಕೃಷ್ಣ ಎನ್ನಿರೊಅಣ್ಣನ ವೈರಿಯ ಮಗನ ಕೊಂದಾತನ _ ಶ್ರೀ ಕೃಷ್ಣ ಎನ್ನಿರೊಬಣ್ಣಿಸಲರಿಯೆ ನಾನಿವನ ಮಹಿಮೆಯ _ ಶ್ರೀ ಕೃಷ್ಣ ಎನ್ನಿರೊ 1


ಮುತ್ತಯ್ಯನಿರೆ ಮೊಮ್ಮಗಗೆ ಪಟ್ಟಗಟ್ಟಿದನ _ ಶ್ರೀ ಕೃಷ್ಣ ಎನ್ನಿರೊಹೆತ್ತವಳಿರೆ ತಾಯ ಬೇರೆ ಪಡೆದಾತನ _ ಶ್ರೀ ಕೃಷ್ಣ ಎನ್ನಿರೊಮತ್ತೇಭಗಾಮಿನಿಗಾಗಿ ವನವಾಸ ಪೋದನ _ ಶ್ರೀ ಕೃಷ್ಣ ಎನ್ನಿರೊಮತ್ತೆ ಹಿರಣ್ಯಕಗೆ ಕಂಬದಲಿ ತೋರ್ದನ - ಶ್ರೀ ಕೃಷ್ಣ ಎನ್ನಿರೊ 2


ಉಗುರು ಕೊನೆಗಳಿಂದ ನಗವನೆತ್ತಿದನ _ ಶ್ರೀ ಕೃಷ್ಣ ಎನ್ನಿರೊಬೊಗಸೆಗಂಗಳ ಬಾಲೆಯರ ತಂದಾತನ _ ಶ್ರೀ ಕೃಷ್ಣ ಎನ್ನಿರೊಮಗಳ ಗಂಡನ ಶಿರವನೆ ಛೇದಿಸಿದನ _ ಶ್ರೀ ಕೃಷ್ಣ ಎನ್ನಿರೊಸುಗುಣ ತನ್ನ ಕಾಗಿನೆಲೆಯಾದಿಕೇಶವನ _ ಶ್ರೀ ಕೃಷ್ಣ ಎನ್ನಿರೊ 3

***