ಏಕೆ ಕಡೆಗಣ್ಣಿಂದ ನೋಡುವೆ - ಕೃಷ್ಣ |
ನೀ ಕರುಣಾಕರನಲ್ಲವೆ ? ಪ
ಭಕ್ತ ವತ್ಸಲ ನೀನಲ್ಲವೆ -ಕೃಷ್ಣ |
ಭಕ್ತ ವತ್ಸಲ ನೀನಲ್ಲವೆ -ಕೃಷ್ಣ |
ಚಿತ್ಸುಖದಾತ ನೀನಲ್ಲವೆ ? ||
ಅತ್ಯಂತ ಅಪರಾಧಿ ನಾನಾದಡೇನಯ್ಯ|
ಇತ್ತಿತ್ತ ಬಾ ಎನ್ನಬಾರದೆ ರಂಗ 1
ಇಂದಿರೆಯರಸ ನೀನಲ್ಲವೆ -
ಇಂದಿರೆಯರಸ ನೀನಲ್ಲವೆ -
ಬಹುಸೌಂದರ್ಯನಿಧಿ ನೀನಲ್ಲವೆ ? ||
ಮಂದಮತಿ ನಾನಾದಡೇನು ಕೃಪಾ-
ಸಿಂಧುನೀ ರಕ್ಷಿಸಬಾರದೆ ರಂಗ2
ದೋಷಿಯು ನಾನಾದಡೇನಯ್ಯ - ಸರ್ವ -
ದೋಷಿಯು ನಾನಾದಡೇನಯ್ಯ - ಸರ್ವ -
ದೋಷರಹಿತ ನೀನಲ್ಲವೆ ? ||
ಗಾಸಿಯೇತಕೆ ನಿನ್ನ ನಂಬಿದೆ ಸಲಹಯ್ಯ |
ಶೇಷಶಾಯಿ ಶ್ರೀಪುರಂದರವಿಠಲ3
****
****