Showing posts with label ಮಂದರಧರ ದೇವ ಮೊರೆಹೊಕ್ಕವರ ಕಾಯ್ವ purandara vittala. Show all posts
Showing posts with label ಮಂದರಧರ ದೇವ ಮೊರೆಹೊಕ್ಕವರ ಕಾಯ್ವ purandara vittala. Show all posts

Thursday, 28 January 2021

ಮಂದರಧರ ದೇವ ಮೊರೆಹೊಕ್ಕವರ ಕಾಯ್ವ purandara vittala

 ರಾಗ –  :  ತಾಳ –


ಮಂದರಧರ ದೇವ ಮೊರೆಹೊಕ್ಕವರ ಕಾಯ್ವ ll ಪ ll 


ಮಂದಾಕಿನಿಯ ಪಿತ ಮಾವ ಕಂಸನ ಹೃತ l

ಸುಂದರ ಶಶಿವದನ ರಂಗಯ್ಯ ll ಅ ಪ ll 


ಕಣ್ಣು ನೋಟದಿ ಚೆಲುವ, ಕಮಠರೂಪದಿ ನಲಿವ l

ಹೆಣ್ಣ ಮೊರೆಯ ಕೇಳಿ ಹಿರಣ್ಯನುದರ ಸೀಳಿ l

ಮಣ್ಣು ಬೇಡಿ ಬೆಳೆದೆ - ಕೃಷ್ಣಯ್ಯ ll

ಹೊನ್ನ ಕೊಡಲಿಯ ಪಿಡಿದು ಹತ್ತುಗ್ರೀವನ ಕಡಿದು l

ಚಿಣ್ಣರ ಒಡಗೂಡಿ ಚಪಲೆಯರ ವ್ರತಗೆಡಿಸಿ l

ಚೆನ್ನರಾವುತನಾದೆಯೊ - ರಂಗಯ್ಯ ll ೧ ll


ಗೋಚರನಂದದಲಿ - ಗಿರಿಯ ತಾಳಿದೆ ಬೆನ್ನಿನಲಿ l

ಭೂಚೋರನ ಕೊಂದು ಬಾಲ ಕರೆಯಲು ಬಂದು l

ಯಾಚಕ ನೀನಾದೆ - ರಂಗಯ್ಯ ll

ಸೂಚತನ ಸುತಗೊಲಿದು ಶರಧಿಯ ಕಟ್ಟಿ ಮೆರೆದೆ l

ಕೀಚಕಹತಪೋಷ ಖೇಚರಪುರವಾಸ l

ನೀಚಜನರ ತರಿದೆ - ರಂಗಯ್ಯ ll ೨ ll


ವನವನಲೆದು ಬಂದ - ವನಿತೆರತ್ನವ ತಂದ l

ಘನಕಂಬದಿಂದ ಬಂದು ಗರುವ ಮುರಿದು ಬಲಿಯ l

ಜನನಿಯ ಶಿರವರಿದೆ - ರಂಗಯ್ಯ ll

ಹನುಮವಂದಿತಪಾದ ಹರುಷ ಪಾಂಡವವರದ l

ಮನಸಿಜವೈರಿಗೊಲಿದು ಮಹಾಕಲಿಕಿಯಾದೆ l

ಘನಪುರಂದರವಿಟ್ಠಲ - ರಂಗಯ್ಯ ll ೩ ll

**