ಪುರಂದರದಾಸರು
ಈ ಸಮಯ ಕಲ್ಲದಿನ್ನೆಲ್ಲಿ ಕಾಯೊದೋಷರಹಿತ ವಸುದೇವ ನೀ ಕಾಯೊ ಕೃಷ್ಣ ಪ
ನಿನ್ನಂಘ್ರಿಯನು ಭಜಿಸಿದವರ ಬಾಳ್ವೆಯ ಕಾಯೊ |ಎನ್ನಸತಿಸುತರು ನಿನ್ನವರೆ ಕಾಯೊ ||ನೀನಲ್ಲದನ್ಯರನು ಕಾಣೆ ಕವಳಿಯ ಕಾಯೊ |ಮುನ್ನ ಸ್ಥಿರವಾಗಿ ನೀನೆಂಬೆ ಕಾಯೊ 1
ಪರವೆಣ್ಣುಗಳಿಗೆ ಎನ್ನ ಮನಸು ಕಾತರಿ ಕಾಯೊ |ದುರಿತದುಷ್ಕರ್ಮ ಮುಂಚಿಲ್ಲ ಕಾಯೊ ||ಕರೆಕರೆಯ ಸಂಸಾರಕಷ್ಟು ಕಡಲಿಯ ಕಾಯೊ |ದುರಿತಭವಶರಧಿಗೆ ತಾರೆ ಕಾಯೊ2
ತ್ರಿವಿಧಪಾಪಂಗಳಿಗೆ ಪದವು ಉದ್ದಿನ ಕಾಯೊ|ಭವಸಾಗರದೊಳೀಸೆಂಬೆ ಕಾಯೊ ||ದಿವಿಜೇಂದ್ರ ಕೃಷ್ಣ ಕೈಪಿಡಿದು ಒಲಿದು ಕಾಯೊ |ನವ ಮುಕ್ತಿಪುರಂದರವಿಠಲ ನೀ ಬಿಡದೆ ಕಾಯೊ3
******