..
kruti by Nidaguruki Jeevubai
ಮಂಗಳಂ ಜಯ ಮಂಗಳಂ ರಾಮ ಸಜ್ಜನರ ಪ್ರೇಮ
ಮಂಗಳಂ ಲೋಕಾಭಿರಘುರಾಮ ಪಟ್ಟಾಭಿರಾಮ ಪ
ಮಂಗಳಂ ಶ್ರೀ ದಶರಥಾತ್ಮಜಗೆ
ಮಂಗಳಂ ಅಯೋಧ್ಯವಾಸಿಗೆ
ಮಂಗಳಂ ಜನಕಜಾಮಾತೆಗೆ
ಮಂಗಳಂ ಶ್ರೀ ರಾಮಚಂದ್ರಗೆ ಅ.ಪ
ದೇವದೇವೋತ್ತಮ ವೈಕುಂಠದೊಳಗೆ ಶ್ರೀ ಭೂಮೇರಿಂದ
ಸೇವೆಗಳ ಕೈಗೊಳ್ಳುತ ಮಲಗಿರಲು
ದೇವಋಷಿ ಬ್ರಹ್ಮೇಂದ್ರಾದಿಗಳು ಸಹಿತ ಶ್ರೀಧರನ ಸ್ತುತಿಸುತ
ರಾವಣಾಸುರನುಪಟಳ ವರ್ಣಿಸಲು
ಶ್ರೀ ವರನು ಸಂತೈಸಿ ಅವರನು
ಭೂಮಿಪತಿ ದಶರಥನ ಪ್ರೇಮ
ಕುಮಾರನಾಗುದಿಸುತಲಯೋಧ್ಯದಿ
ಪ್ರೇಮ ತೋರುತ ಮೆರೆದವಗೆ ಜಯ1
ದಶರಥನ ಸುತರಾಗಿ ಬೆಳೆಯುತಲಿ ಕೌಶಿಕನÀಯಜ್ಞವ
ಕುಶಲದಲಿ ರಕ್ಷಿಸುತ ಹರುಷದಲಿ
ಎಸೆವ ಧನುವನು ಮುರಿದು ನಿಮಿಷದಲಿ
ಶಶಿಮುಖಿಯ ಕೂಡುತ
ಕುಶಲದಲಿ ವನವಾಸ ಚರಿಸುತಲಿ
ದಶಶಿರನು ಜಾನಕಿಯ ಕದಿಯಲು
ಶಶಿಮುಖಿಯನರಸುತಲಿ ವನವನ
ವಸುಧಿಪತಿ ಕಪಿಗಳ ಕಳುಹಿ ಸತಿ
ಕುಶಲ ತಿಳಿಯುತ ನಲಿದವಗೆ ಜಯ 2
ಬಂದ ಕಪಿ ಕಟಕವನೆ ನೋಡುತ್ತ ಸಾಗರಕೆ ಸೇತುವೆ
ಒಂದೇ ನಿಮಿಷದಿ ರಚಿಸಿ ಶೀಘ್ರದಲಿ
ಮಂದಮತಿ ರಾಕ್ಷಸರ ವಧಿಸುತಲಿ ಅಂದಣವ ಕಳುಹಿ
ಮಂದಗಮನೆಯ ಕರೆಸಿ ಬೇಗದಲಿ
ಬಂದ ರಾಮನು ಎಂದು ಮಾರುತಿ
ಮುಂದೆ ಭರತಗೆ ಕುಶಲ ತಿಳಿಸಲು
ತಂದೆ ಕಮಲನಾಥ ವಿಠಲ
ಮುಂದೆ ಪ್ರಜೆಗಳ ಪೊರೆದವಗೆ ಜಯ 3
***