ರಾಗ ಮುಖಾರಿ ಝಂಪೆ ತಾಳ
ಯಾಕೆ ಈ ದೇಹವನು ದಂಡಿಸುವೆ ವ್ಯರ್ಥ, ಬಿಡ-
ದೇಕಚಿತ್ತದಲಿ ಲಕ್ಷ್ಮೀಪತಿ ಎನ್ನದೆ ||ಪ||
ಸ್ನಾನವನು ಮಾಡಿ ನೀ ಧ್ಯಾನಿಸುವೆನೆಂದೆನುತ
ಮೌನದಲಿ ಕುಳಿತು ಬಕಪಕ್ಷಿಯಂತೆ
ಹೀನ ಬುದ್ಧಿಗಳ ಯೋಚಿಸಿ ಕುಳಿತು ಫಲವೇನು
ದಾನವಾಂತಕನ ಧ್ಯಾನಕೆ ಮೌನವುಂಟೆ ||೧||
ಜಪವ ಮಾಡುವೆನೆನುತ ಕಪಟ ಬುದ್ಧಿಯ ಗುಣಿಸಿ
ಗುಪಿತದಿಂದಲಿ ಕುಳಿತು ಫಲವು ಏನೊ
ಅಪರಿಮಿತ ಮಹಿಮ ನಾರಾಯಣಾ ಎಂದೆನಲು
ಸಫಲವಲ್ಲದೆ ಬೇರೆ ಜಪವು ತಾನುಂಟೆ ||೨||
ಹಿಂದಜಾಮಿಳಗೆ ನಾಮಮಾತ್ರದಿ ಮುಕುತಿಯನು
ಚಂದದಿಂ ಕರುಣಿಸಿದುದಿಲ್ಲವೇನೊ
ಸಂದೇಹವನು ಬಿಟ್ಟು ನೀನೊಂದು ಕ್ಷಣ ಬಿಡದೆ
ತಂದೆ ಪುರಂದರ ವಿಠ್ಠಲ ಎನು ಕಂಡ್ಯ ಮನವೆ ||೩||
******
ಯಾಕೆ ಈ ದೇಹವನು ದಂಡಿಸುವೆ ವ್ಯರ್ಥ, ಬಿಡ-
ದೇಕಚಿತ್ತದಲಿ ಲಕ್ಷ್ಮೀಪತಿ ಎನ್ನದೆ ||ಪ||
ಸ್ನಾನವನು ಮಾಡಿ ನೀ ಧ್ಯಾನಿಸುವೆನೆಂದೆನುತ
ಮೌನದಲಿ ಕುಳಿತು ಬಕಪಕ್ಷಿಯಂತೆ
ಹೀನ ಬುದ್ಧಿಗಳ ಯೋಚಿಸಿ ಕುಳಿತು ಫಲವೇನು
ದಾನವಾಂತಕನ ಧ್ಯಾನಕೆ ಮೌನವುಂಟೆ ||೧||
ಜಪವ ಮಾಡುವೆನೆನುತ ಕಪಟ ಬುದ್ಧಿಯ ಗುಣಿಸಿ
ಗುಪಿತದಿಂದಲಿ ಕುಳಿತು ಫಲವು ಏನೊ
ಅಪರಿಮಿತ ಮಹಿಮ ನಾರಾಯಣಾ ಎಂದೆನಲು
ಸಫಲವಲ್ಲದೆ ಬೇರೆ ಜಪವು ತಾನುಂಟೆ ||೨||
ಹಿಂದಜಾಮಿಳಗೆ ನಾಮಮಾತ್ರದಿ ಮುಕುತಿಯನು
ಚಂದದಿಂ ಕರುಣಿಸಿದುದಿಲ್ಲವೇನೊ
ಸಂದೇಹವನು ಬಿಟ್ಟು ನೀನೊಂದು ಕ್ಷಣ ಬಿಡದೆ
ತಂದೆ ಪುರಂದರ ವಿಠ್ಠಲ ಎನು ಕಂಡ್ಯ ಮನವೆ ||೩||
******