Showing posts with label ನಿತ್ಯ ಸಾಗರನರಾಣಿ ಅಜನ ನಿರೂಪದಲಿ ಜಾಬಾಲಿ vijaya vittala. Show all posts
Showing posts with label ನಿತ್ಯ ಸಾಗರನರಾಣಿ ಅಜನ ನಿರೂಪದಲಿ ಜಾಬಾಲಿ vijaya vittala. Show all posts

Thursday, 17 October 2019

ನಿತ್ಯ ಸಾಗರನರಾಣಿ ಅಜನ ನಿರೂಪದಲಿ ಜಾಬಾಲಿ ankita vijaya vittala

ವಿಜಯದಾಸ
ನಿತ್ಯ ಸಾಗರನರಾಣಿ ಪ

ಅಜನ ನಿರೂಪದಲಿ ಜಾಬಾಲಿ ರಿಷಿ ನಿಂದು
ಭಜಿಸಿದನು ನಿನ್ನ ಬಹುದಿನಂಗಳಲಿ
ನಿಜವಾಗಿ ಹರನ ಶಿರದಲ್ಲಿ ಉದ್ಧವಿಸಿದೆ
ತ್ರಿಜಗದೊಳಗೆ ಮೆರೆದೆ ತ್ರಿದಶಸುರಶುಭವರದೆ 1

ಎತ್ತ ನೋಡಿದರತ್ತ ನಾಲ್ಕೂವರೆ ಯೋಜನವು
ಸ್ತುತ್ಯ ಪುಣ್ಯದೇವಿ ಎನಿಸಿಕೊಂಬೆ
ಸ್ತುತಿಸಲಳವೇ ನಿಮ್ಮ ಮಹಿಮೆ ಅಮಿತವಲ
ಮತ್ತಗಜಗಮನೆ ಶುಭಕರೆ ಜ್ಞಾನಧಾರೆ 2

ನೂಗದ ಪಾಪಗಳೆನಿತೊ ನಿನ್ನ ದುರುಶನವು
ಆಗುತ್ತ ಓಡಿದವು ತಳವಿಲ್ಲದೇ
ಬಾಗಿಲ ಕಾಯುವ ಭಾಗ್ಯವ ನೀಡೆಲೆ ವರದೇ 3

ಕಲಿಯುಗದಿ ನೀನೇ ವೆಗ್ಗಳಳೆಂದು ಸಾತ್ವಿಕರು
ಒಲಿದು ಕೊಂಡಾಡುವರು ನಿರುತದಲಿ
ಜಲನಿಧಿಯ ಇಮ್ಮೊಗದಿಂದಲಿ ಮೆರದೆ ಮಹತಟನಿನೆಲೆಗೊಳಿಸು ವಿಜಯವಿಠ್ಠಲನ ಸಂಪದದೊಳು4
***********