ಕೊಡು ವರವಾ ನೀ ಪಿಡಿ ಕರವಾ ಪ
ಜಡಜ ಸದನೆ ಪಾಲ್ಗಡಲ ನಂದನೆ
ಪೊಡವಿ ಜನನಿ ನಿಮ್ಮಡಿಗಳಾಂಬುಜವಾ
ಧೃಡ ಸುಜ್ಞಾನದಿ ಬಿಡದೆ ಪೂಜಿಸುವೆ 1
ಇಕ್ಷುಶರನ ಪಿತ ವಕ್ಷನಿಲಯೆ | ಕಮ
ಲಾಕ್ಷಿ ಕೋಮಲೆ ಮೋಕ್ಷದಾತಳೆ
ಲಕ್ಷ್ಮಿಯ ಕರುಣ ಕಟಾಕ್ಷದಿಂದೀಕ್ಷಿಸಿ 2
ಧಿಟ್ಟ ಶಾಮಸುಂದರವಿಠಲನ
ನಿಷ್ಟೆಯಿಂದಲಿ ಮನಭಜಿಸೊ ಸುಖ ಕೊಟ್ಟು
ಕಠಿಣ ಭವ ಕಟ್ಟಿ ಓಡಿಸಿ 3
***