Showing posts with label ಎತ್ತಿಕೊಳ್ಳೆ ಗೋಪೀ ರಂಗನ purandara vittala. Show all posts
Showing posts with label ಎತ್ತಿಕೊಳ್ಳೆ ಗೋಪೀ ರಂಗನ purandara vittala. Show all posts

Wednesday, 4 December 2019

ಎತ್ತಿಕೊಳ್ಳೆ ಗೋಪೀ ರಂಗನ purandara vittala

ಪುರಂದರದಾಸರು
ಎತ್ತಿಕೊಳ್ಳೆ ಗೋಪೀ ರಂಗನ |ರಚ್ಚೆಮಾಧವರಾಯ ನಿಲುವನಲ್ಲ||ಪ||

ಕರ್ಣದ ಮಾಗಾಯಿ ಕದಪಲಿ ಹೊಳೆಯುತ |ಎಣ್ಣೆಮಣಿಯ ಕೊರಳಲಿ ಹುಲಿಯುಗುರು ||ಚಿನ್ನದ ಬಾಯೊಳು ಅಮೃತವ ಸುರಿಯುತ್ತ |ಬೆಣ್ಣೆ-ಹಾಲನುಂಬುವೆನೆಂದು ಬಂದ 1

ಅಂಬೆಗಾಲಿಕ್ಕುತ ತುಂಬಿಯೊಲ್ ಮೊರೆಯುತ &mಜಚಿsh; |[ಚೆಂದದ] ಅರಳೆಲೆ ನಲಿದಾಡುತ ||ಬಂದು ಸರಳನಂದದಿ ಬಾಯ ಬಿಡುತ ಮು &mಜಚಿsh; |ಕುಂದನು ಮೊಲೆಯನುಂಬುವೆನೆಂದು ಬಂದ 2

ಬಿಗಿದ ಪಟ್ಟೆಯಲಿ ಬಾಯ್‍ತಲೆಯು ಹೊಳೆಯುತಿರೆ |ಚಿಗುಟುತ ಎಡದ ಕೈಯಲಿ ಕುಚವ ||ನಗುತ ನಾಚುತ ಗೋಪಿಯ ಮುಖ ನೋಡುತ |ಮಿಗೆ ನಲಿನಲಿದುಂಡ ಪುರಂದರವಿಠಲ 3
***

pallavi

etti koLLe gOpi rangana racce mAdhavarAya ninuvanalla

caraNam 1

karNada mAgAyi kadapali hoLeyuta eNNe maNiyu koraLali huliyuguru
cinnada bAyoLu amrtava suriyutta beNNe hAlanumbuvenendu banda

caraNam 2

ambegAlikkuda tumbiyol moreyuta cendada araLale nalitADuta
bandu saraLanandadi bAya biDuda mukundanu moleyanumbuvenendu banda

caraNam 3

bigida paTTeyali bAi taleyu hoLeyutire ciguTuta edada kaiyali kucava
naguta nAkata gOpiya mukha nODuta mige nalinalidADuta purandara viTTala
***