ರಾಗ ಮೋಹನ ಅಟ ತಾಳ
ನಿನ್ನ ದಯದೃಷ್ಟಿಗೆ ಚಿತ್ತವಿಲ್ಲದಿರೆ ಮುನ್ನೇನು ಗತಿಯು ಎನಗೆ ||ಪ||
ನಿನ್ನ ದಯದೃಷ್ಟಿಗೆ ಚಿತ್ತವಿಲ್ಲದಿರೆ ಮುನ್ನೇನು ಗತಿಯು ಎನಗೆ ||ಪ||
ಚೆನ್ನಾರ ಚೆಲುವ ಕೇಶವರಾಯ ನಂಬಿದೆನೊ ಧನ್ಯನ ಮಾಡಿ ಸಲಹೋ ದೇವ ||ಅ||
ಅರಿಯೆನೋ ತಾರತಮ್ಯನುಸಾರಗಳಿಂದ ಗುರು ಹಿರಿಯರನು ಭಜಿಸದೆ
ಗರುವ ಅಹಂಕಾರದಲಿ ಐಶ್ವರ್ಯಮದದಿಂದ ಪರರ ನಿಂದಿಸುತದಲಿದ್ದೆ
ಅರುಣೋದಯದಲೆದ್ದು ಕ್ಷುದ್ಬಹಳವಹುದೆಂಡು ಮೋರೆ ತೊಳೆಯದೆ ಮೆಲ್ಲುತಿದ್ದೆ
ಘೋರ ದುರಿತಗಳ ಎಣಿಸಿದರೆ ನೆಲೆಗಾಣೆ ಮೊರೆಹೊಕ್ಕೆ ಹರಿ ರಕ್ಷಿಸೊ ||
ಸ್ನಾನ ಮಾಡಿದರೆನ್ನ ದೇಹ ತಾಳದು ಎಂದು ಕಳ್ಳ ನಾಮವ ತಿದ್ದುವೆ
ಘನ್ನ ಬ್ರಹ್ಮರು ಉಪನ್ಯಾಸ ಮಾಡಿದರೆ ಕಂಡು ಕೋಪದಿ ನೂಕುವೆ
ದೀನತ್ವದಿಂದ ಒಬ್ಬರಿಗೆ ರುವ್ವಿ ಕೊಡದಲೆ ಧನ ಗಳಿಸಿ ಕೂಡ್ಹಾಕುವೆ
ಏನು ಮಾಡಲಿ ಜನ್ಮ ವ್ಯರ್ಥವಲ್ಲದೆ ಕೆಟ್ಟೆ ನೀನೇ ರಕ್ಷಕನು ಕಾಯೋ ದೇವ ||
ಸತಿಸುತರ ಮೆಚ್ಚಿ ತಾಯಿತಂದೆಯ ಕೂಡೆ ಅತಿದ್ವೇಷವನು ಮಾಡುವೆ
ಪ್ರತ್ಯೇಕ ವಂಟಿಯಲಿ ವಗತನದಿ ಮನೆಯೊಳಗೆ ನಿಗ್ರಹವ ಮಾಡುವೆ
ಕಥೆ ಪುರಾಣಶ್ರವಣ ಮಾಡುವವರ ಬಳಿಗ್ಹೋಗಿ ಪ್ರತಿಭಂಡ ಮಾತಾಡುವೆ
ಚಿತ್ತಜನ ಪಡೆದಂಥ ಅಚ್ಯುತನೆ ಲಾಲಿಸೋ ಕುತ್ಸಿತ ಬುದ್ಧಿಗಳ ಬಿಡಿಸೋ ದೇವ ||
ಇರುಳು ಹಗಲು ಮನಸಿನೊಳು ಕ್ಷುದ್ರ ಮಾತಿನ ಧ್ಯಾನ ಹರಿಯೆಂದು ಸ್ಮರಿಸಲಿಲ್ಲ
ಧರೆಯಲಿಹ ಪರರಂಗನೆಯರ ಚೆಲುವಿಕೆ ಕಂಡು ಬಿದ್ದ್ಹೊರಳಿ ಕೆಟ್ಟೆನಲ್ಲ
ಹೊರವರು ಎನ್ನ ಮುವ್ವತ್ತೆರಡು ಮಂದಿಗಳ ಗುರಿಗೆ ಬಲಿಯಾದೆನಲ್ಲ
ಶ್ರೀರಮಣ ಕ್ಷಮಿಸಯ್ಯ ಸರ್ವಾಪರಾಧಗಳ, ನಿನ್ನ ಕಿಂಕರನೆನಿಸೊ ||
ಕೆಟ್ಟ ಅಜಮಿಳಗೆ ನೀ ಕೊಟ್ಟೆ ಮುಕುತಿಯ ಬೇಗ, ಕಾಯಿದೆ ದ್ರೌಪದಿ ಮಾನವ
ಸೃಷ್ಟೀಶ ನೀನರಿಯೆ ಅವರ ಸರಿಯಾಗುವೆನೆ, ದಾಸಾನುದಾಸ ನಾನು
ಇಟ್ಟು ನಿಮ್ಮ ಪಾದದಡಿಯಲ್ಲಿ ಹಲಕಾಲ ಮನವಿಡ್ವಂತೆ ಮಾಡಲೆನ್ನ
ಸಟೆಯನಾಡುವನಲ್ಲ ಪುರಂದರವಿಠಲ ದಡ ಸೇರಿಸೋ ಎನ್ನನು ದೇವ ||
***
pallavi
ninna daya drSTige cittavilladire munnEnu gatiyu enage
anupallavi
cennAra celuva kEshavarAya nambideno dhanyana mADi salahO dEva
caraNam 1
ariyenO tAratamyanusAgaraLinda guru hariyaranu bhajiside
garuva ahankAradali aishvarya madadinda parara nindisutadalidde
aruNOdayadaleddu kSadbahaLavahudendu mOre toLeyade mellutidde
ghOra duritagaLa eNisidare nele kANe morehokke hari rakSiso
caraNam 2
snAna mADidarenna dEha tALadu endu kaLLa nAmava tidduve
ghanna brahmaru upanyAsa mADidare kaNDu kOpadinUkuve
dInatvadinda obbarige ruvvi koDadale dhana gaLisi kUDhAkuve
Enu mADali janma vyarttavallade keTTe nInE rakSakanu kAyO dEva
caraNam 3
satisutara mecci tAyi tandeya kUDe ati dvESavanu mADuve
pratyEka vaNTiyali vagatanadi maneyoLage nigrahava mADuve
kathe purANa shravaNa mADuvavara baLighOgi prati bhaNDa mADuve
cittajana paDedantha acyutana lAlisO kutsita buddhigaLa biDisO dEva
caraNam 4
iruLu hagalu manasinoLu kSUdra mAtina dhyAna hariyendu smarisavilla
dhareyaliha pararanganeyara celuvike kaNDu bidhoraLi keTTenalla
horavaru enna muvvatteraDu mandigaLa gurige baliyAdenalla
shrI ramaNa kSamisayya sarvAparAdagaLa ninna kinkaraneniso
caraNam 5
keTTa ajamiLage nI koTTe mukutiya bEga kAyide draupadi mAnava
shrSTIsha nInariye avara sariyAguvene dAsAnudAsa nAnu
iTTu nimma pAdadaDiyalli halakAla manaviDvande mADalenna
saDeyanADuvanalla purandara viTTala daDa sErisO ennanu dEva
***