Showing posts with label ಳಳ- ಭಾವಗೀತೆ- ಮುನಿಸು ತರವೇ ಮುಗುದೆ ಹಿತವಾಗಿ ನಗಲೂ ಬಾರದೆ MUNISU TARAVE MUGUDE HITAVAGI NAGALU BAARADE. Show all posts
Showing posts with label ಳಳ- ಭಾವಗೀತೆ- ಮುನಿಸು ತರವೇ ಮುಗುದೆ ಹಿತವಾಗಿ ನಗಲೂ ಬಾರದೆ MUNISU TARAVE MUGUDE HITAVAGI NAGALU BAARADE. Show all posts

Monday, 27 December 2021

ಮುನಿಸು ತರವೇ ಮುಗುದೆ ಹಿತವಾಗಿ ನಗಲೂ ಬಾರದೆ others MUNISU TARAVE MUGUDE HITAVAGI NAGALU BAARADE

ಸಾಹಿತ್ಯ – ಸುಬ್ರಾಯ ಚೊಕ್ಕಾಡಿ

ಮುನಿಸು ತರವೇ ಮುಗುದೆ

ಹಿತವಾಗಿ ನಗಲೂ ಬಾರದೆ ||

ಕರಿಮುಗಿಲ ಬಾನಿನಲ್ಲಿ ಮಿಂಚರಳಲು

ತಾರೆಗಳು ಮೈಯ ಬಳಸಿ ಜುಮ್ಮೆನ್ನಲು |

ನವ ಭಾವ ತುಂಬಿ ತುಂಬಿ ಮನ ಹಾಡಲು

ತೆರದಂತಿದೆ ಭಾಗ್ಯದ ಬಾಗಿಲು ||ಮುನಿಸು||

ಎಷ್ಟೊಂದು ಕಾಲದಿಂದ ಹಂಬಲಿಸಿದೆ

ನೀ ಬಂದು ಸೇರಿ ನನ್ನ ಮುದಗೊಳಿಸಿದೆ |

ಜೀವನದ ನೂರು ಕನಸು ನನಸಾಗಿದೆ

ಮುನಿಸೇತಕೆ ಈ ಬಗೆ ಮೂಡಿದೆ ||ಮುನಿಸು||

ಹೊಸ ಬಾಳ ಬಾಗಿಲಲ್ಲಿ ನಾವೀದಿನ

ನಿಂತಿರುವ ವೇಳೆಯಲ್ಲಿ ಏಕೀ ಮನ |

ವಾಗರ್ಥದಂತೆ ನಮ್ಮ ಈ ಮೈಮನ

ಜತೆ ಸೇರಲು ಜೀವನ ಪಾವನ ||ಮುನಿಸು||

***