ಕಾಖಂಡಕಿ ಶ್ರೀ ಕೃಷ್ಣದಾಸರು
ಶ್ರೀ ಗುರುವೇ ನೀ ತೋರಿಸೋ ದಯದಿಂದ ಲೆನಗೆ | ಬೇಗದಿ ಬಂದೆನ್ನ ದೇವನೀಗ ಪ
ತೈಲ ಯಂತ್ರ ದೊಳಿಪ ಪಶುವಿನಂದದಿ ಜೀಯಾ | ಹಲವು ಜನ್ಮವ ತಾಳಿದೆನಯ್ಯಾ 1
ನಿನ್ನ ಸ್ಮರಣೆ ಮರೆದು ನಾನಾ ಉಪಾಸನೆ ವಿಡಿದು | ಬನ್ನ ಬಟ್ಟೆನೋ ಯಚ್ಚರ ಜರಿದು2
ಭವ ಬಂಧನ ಹರಿವಾ | ಸೂರೆಗೊಳಲಿಲ್ಲಾ ಭಕ್ತಿ ಸುಖವಾ3 ಸರ್ವಾಪರಾಧವಾ ಕ್ಷಮಿಸಿ ಯನ್ನುದ್ಧಾರವಾ | ಉರ್ವಿಲಿ ಮಾಡು ಪಿಡಿದು ಕರವಾ 4
ಇಹಪರ ಸಹಕಾರ ಕರುಣಾಬ್ದಿ ಪಾರಾವಾರಾ | ಮಹಿಪತಿ ಸುತ ಪ್ರಭು ಉದಾರಾ5
***