Showing posts with label ಎಷ್ಟು ಪುಣ್ಯ ಮಾಡೀ ಕಂಬ ವಿಠ್ಠಲನ್ನ ಗುಡಿ ಸೇರಿತೋ gopalakrishna vittala. Show all posts
Showing posts with label ಎಷ್ಟು ಪುಣ್ಯ ಮಾಡೀ ಕಂಬ ವಿಠ್ಠಲನ್ನ ಗುಡಿ ಸೇರಿತೋ gopalakrishna vittala. Show all posts

Sunday 1 August 2021

ಎಷ್ಟು ಪುಣ್ಯ ಮಾಡೀ ಕಂಬ ವಿಠ್ಠಲನ್ನ ಗುಡಿ ಸೇರಿತೋ ankita gopalakrishna vittala

ಎಷ್ಟು ಪುಣ್ಯ ಮಾಡೀ ಕಂಬ

ವಿಠ್ಠಲನ್ನ ಗುಡಿ ಸೇರಿತೋ ಪ.


ಶ್ರೇಷ್ಠ ಪುರಂದರ ದಾಸರನ್ನು

ಕಟ್ಟಿಸಿಕೊಂಡು ತಾ ಪೂಜೆಗೊಂಡಿತೊ ಅ.ಪ.


ಎಲ್ಲಾ ಕಂಬಗಳಿದ್ದರೂ ಇಂತು

ಇಲ್ಲೀ ಇದಕೆ ಈ ಖ್ಯಾತಿಯು ಬಂತು

ಬಲ್ಲಿದ ಸುಜನ ವಂದಿಪರಿ

ಪುಲ್ಲನಾಭನ್ನ ಕೃಪೆಯ ಪಡೆದಿತು 1

ಮಾಯಾಕಾರನು ನೀರನು ತಂದು

ಈಯಲು ಪುರಂದರದಾಸರಿಗಂದು

ನೋಯಿಸೆ ತಿಳಿಯದೆ ಮನಕದ ತಂದು

ನ್ಯಾಯದಿ ಕಟ್ಟಿಸಿ ಹೊಡೆಸಿದನಂದು 2

ದಾಸರಂತೆ ತಾನು ವೇಷವ ಧರಿಸಿ

ವೇಶ್ಯೆಗೆ ತನ್ನ ಕಂಕಣವನ್ನೆ ಕೊಡಿಸಿ

ತಾಸೊತ್ತಿನಾ ರಾತ್ರೆ ಹೊಡೆದದ್ದ ನೆನಸಿ

ವಾಸುದೇವ ಬೈಲಿಗೆಳೆಸಿದ ಬಿಗಿಸಿ 3

e್ಞÁನ ಪುಟ್ಟಲು ಹರಿಮಾಯವಿದೆಂದು

ಶ್ರೀನಿವಾಸ ತಾ ವಲಿದನು ಅಂದು

ಆನಂದದಿಂದೊಂದು ಕವನ ಗೈದು

ಶ್ರೀನಿಧೆ ಮುಟ್ಟಿತು ಮುಯ್ಯವಿದೆಂದು4

ದಾಸರ ಅಂಗವು ಸೋಕಿದ್ದರಿಂದ

ಶ್ರೀಶನು ಹಗ್ಗದಿ ಬಿಗಿಸಿದ್ದರಿಂದ

ದಾಸರ ಪೆಸರಲಿ ಮೆರೆವುದರಿಂದ

ದೋಷ ಪೋಯಿತು ಕಂಬಕೆ ಭವ ಬಂಧ5

ಹಿಂದೆ ಕಂಬದಿ ನರಹರಿ ಅವತರಿಸೆ

ಅಂದಿನ ಕಂಬವೆ ಈಗಿಲ್ಲ್ಲಿ ಉದಿಸೆ

ಸಿಂಧುಶಯನನ್ನ ದಾಸತ್ವ ವಹಿಸೆ

ಬಂದಿತು ವಿಠಲನ್ನ ಗುಡಿಯನಾಶ್ರೈಸೆ6


ದಾಸರ ದರುಶನ ಕರ್ಮ ಕಳೆವುದು

ದಾಸರ ವಾಕ್ಶ್ರವಣ e್ಞÁನವೀಯುವುದು

ದಾಸರ ಉಪದೇಶ ಹರಿಯ ತೋರುವುದು

ದಾಸರ ಸ್ಪರ್ಶವು ಮುಕ್ತಿಗೊಯ್ಯವುದು7

ಕಂಭವೆ ಸಾಕ್ಷಿಯು ಈ ಕಲಿಯುಗದಿ

ಡಾಂಭಿಕ ಜನರಿಗೆ ತಿಳಿಯದು ಹಾದಿ

ಬೆಂಬಿಡದೆ ಹರಿ ಕಾಯುವ ಭರದಿ

ಇಂಬುಗೊಟ್ಟು ತನ್ನ ನಿಜ ದಿವ್ಯ ಪುರದಿ 8

ದಾಸರ ಮಾರ್ಗವೆ ಸುಲಭವೆಂತೆಂದು

ದಾಸರ ಕೃಪೆ ದ್ವಾರ ವಲಿಯುವೆನೆಂದು

ದಾಸರ ದೂಷಿಸೆ ಗತಿ ಇಲ್ಲೆಂದು

ಶ್ರೀಶ ತಾನಿಲ್ಲೀ ನಿಂತನು ಬಂದು 9

ಶ್ರೀ ರಮಾಪತಿ ಓಡಿ ಬಂದ ನಿಲ್ಲೆಂದೂ

ದ್ವಾರಕ ಪುರದೊಂದು ಕಂಭವೆ ಬಂದು

ಸೇರಿತೊ ವಿಠಲನ ಮಂದಿರವಂದು

ಸೂರೆಗೈದರೊ ಖ್ಯಾತಿ ದಾಸರು ಬಂದು 10

ನಿಜದಾಸರಂಗಸಂಗದ ಫಲದಿ

ರಜತದ ಕಟ್ಟಿನಿಂ ಮೆರೆದಿತು ಜಗದಿ

ಸುಜನರ ಸಂಗದಿ ಮುಕುತಿಯ ಹಾದಿ

ಭುಜಗಶಯನ ತೋರುವ ನಿರ್ಮಲದಿ 11

ತತ್ವವನಿದರಿಂದ ತಿಳಿವುದು ಒಂದು

ಉತ್ತಮತ್ವ್ವವು ಜಡಕಾಯಿತು ಬಂದು

ಉತ್ತಮರಾ ಪಾದ ಸೋಂಕಲು ಅಂದು

ವ್ಯರ್ಥವಾಗದು ಹರಿಭಕ್ತರೆ ಬಂಧು12

ಪಾಪ ನಿರ್ಲೇಪವಾಗೋದು ವಿಠ್ಠಲನ್ನ

ಆಪಾದ ಮೌಳಿಯ ರೂಪ ದರುಶನ್ನ

ಈ ಪರಿ ಖ್ಯಾತಿ ಪೊಂದಿತು ಕಂಬ ಘನ್ನ

ಗೋಪಾಲಕೃಷ್ಣವಿಠ್ಠಲ ಸುಪ್ರಸನ್ನ 13

****