Showing posts with label ಳಳ- RSS- ಸೇವೆಯ ಸೇತುವೆ ಕಟ್ಟಲು SEVEYA SETUVE KATTALU rss. Show all posts
Showing posts with label ಳಳ- RSS- ಸೇವೆಯ ಸೇತುವೆ ಕಟ್ಟಲು SEVEYA SETUVE KATTALU rss. Show all posts

Friday, 24 December 2021

ಸೇವೆಯ ಸೇತುವೆ ಕಟ್ಟಲು others SEVEYA SETUVE KATTALU rss

 


RSS song  


ಸೇವೆಯ ಸೇತುವೆ ಕಟ್ಟಲು ಬನ್ನಿ

ವ್ಯಕ್ತಿ ಸಮಾಜದ ನಡುವೆ || ಪ ||


ಸೇವೆಯೆ ತತ್ವದ ಸಾರವು ನಿಜದಿ ಸೇವೆಯೆ ಜೀವನ ಧರ್ಮ

ಸ್ವಾರ್ಥ ದುರಾಸೆಯ ನೀಗಿಸಿ ಬಾಳನು ಸಾರ್ಥಕಗೊಳಿಸುವ ಮರ್ಮ

ಕಂಗೆಡಿಸುವ ಕಗ್ಗತ್ತಲ ಕೂಪದಿ ಸೇವೆಯೆ ದಾರಿ ದೀಪ

ದುಃಖಿತ ಜನಗಳ ಕಂಬನಿ ಒರೆಸುವ ಕರುಣೆಯ ಮಾತೃ ಸ್ವರೂಪ || ೧ ||


ಅಕ್ಷರ ವಿದ್ಯೆಯ ಕಲಿಸಿ ನಿರಕ್ಷರ ಕುಕ್ಷಿಗಳಿಗೆ ಒಲವಿಂದ

ಅಕ್ಷಯ ರಕ್ಷಣೆ ನೀಡುತ ಶೋಷಿತ ಜನತೆಗೆ ಛಲಬಲದಿಂದ

ಕಾರ್ಪಣ್ಯದ ಘಟಸರ್ಪದ ದರ್ಪವ ಮುರಿಯಲು ಸೇವೆಯ ಮಾರ್ಗ

ತ್ಯಾಗ ಸಮರ್ಪಣ ಭಾವದಿ ದುಡಿದರೆ ಧರೆಯಿದು ಆಗದೆ ಸ್ವರ್ಗ || ೨ ||


ಮನೆಮನೆಯಾಗಲಿ ಸೇವಧಾಮ ಚಿರವಾತ್ಯಲದ ಸೆಲೆಯು

ನೋವಲಿ ನರಳಿಹ ಹತಭಾಗ್ಯರಿಗೆ ನಲಿವನು ನೀಡುವ ನೆಲೆಯು

ಅಸ್ಪೃಶ್ಯತೆ ಅನ್ಯಾಯವನಳಿಸಲು ಗೈಯ್ಯುವ ದೃಢ ಸಂಕಲ್ಪ

ಭಾರತ ಮಾತೆಯ ಆರಾಧನೆಗೆ ಅರ್ಪಿಸಿ ಜೀವನ ಪುಷ್ಪ || ೩ ||

***

sEveya sEtuve kaTTalu banni

vyakti samAjada naDuve || pa ||


sEveye tatvada sAravu nijadi sEveye jIvana dharma

svArtha durAseya nIgisi bALanu sArthakagoLisuva marma

kaMgeDisuva kaggattala kUpadi sEveye dAri dIpa

duHKita janagaLa kaMbani oresuva karuNeya mAtRu svarUpa || 1 ||


akShara vidyeya kalisi nirakShara kukShigaLige olaviMda

akShaya rakShaNe nIDuta SOShita janatege ChalabaladiMda

kArpaNyada GaTasarpada darpava muriyalu sEveya mArga

tyAga samarpaNa bhAvadi duDidare dhareyidu Agade svarga || 2 ||


manemaneyAgali sEvadhaama ciravAtyalada seleyu

nOvali naraLiha hatabhAgyarige nalivanu nIDuva neleyu

aspRushyate anyAyavanaLisalu gaiyyuva dRuDha saMkalpa

BArata mAteya Araadhanege arpisi jIvana puShpa || 3 ||

***

ಸೇವೆಯ ಸೇತುವೆ ಕಟ್ಟಲು ಬನ್ನಿ ವ್ಯಕ್ತಿ ಸಮಾಜದ ನಡುವೆ

ನಾಡದೇವತೆಗೆ ಅರ್ಪಿಸಬನ್ನಿ ತನುಮನಧನಗಳ ಒಡವೆ || ಪ ||


ಸೇವೆಯೆ ತತ್ವದ ಸಾರವು ನಿಜದಿ ಸೇವೆಯೆ ಜೀವನ ಧರ್ಮ

ಸ್ವಾರ್ಥ ದುರಾಶೆಯ ನೀಗಿಸಿ ಬಾಳನು ಸಾರ್ಥಕಗೊಳಿಸುವ ಮರ್ಮ

ಕಂಗೆಡಿಸುವ ಕಗ್ಗತ್ತಲಕೂಪದಿ ಸೇವೆಯೆ ದಾರಿದೀಪ

ದುಃಖಿತ ಜನತೆಯ ಕಂಬನಿಯೊರೆಸುವ ಕರುಣೆಯ ಮಾತೃಸ್ವರೂಪ || 1 ||


ಅಕ್ಷರವಿದ್ಯೆಯ ಕಲಿಸಿ ನಿರಕ್ಷುರಕುಕ್ಷಿಗಳಿಗೆ ಒಲವಿಂದ

ಅಕ್ಷಯ ರಕ್ಷಣೆ ನೀಡುತ ಶೋಷಿತ ಜನತೆಗೆ ಛಲಬಲದಿಂದ

ಕಾರ್ಪಣ್ಯದ ಘಟಸರ್ಪದ ದರ್ಪವ ಮುರಿಯಲು ಸೇವೆಯ ಮಾರ್ಗ

ತ್ಯಾಗ ಸಮರ್ಪಣಭಾವದಿ ದುಡಿದರೆ ಧರೆಯಿದು ಆಗದೆ ಸ್ವರ್ಗ? || 2 ||


ಮನೆಮನೆಯಾಗಲಿ ಸೇವಾಧಾಮ ಚಿರವಾತ್ಸಲ್ಯದ ಸೆಲೆಯು

ನೋವಲಿ ನರಳಿಹ ಹತಭಾಗ್ಯರಿಗೆ ನಲಿವನು ನೀಡುವ ನೆಲೆಯು

ಅಸ್ಪೃಶ್ಯತೆ ಅನ್ಯಾಯವನಳಿಸಲು ಗೈಯುವ ದೃಢಸಂಕಲ್ಪ

ಭಾರತಮಾತೆಯ ಆರಾಧನೆಗೆ ಅರ್ಪಿಸಿ ಜೀವನಪುಷ್ಪ || 3 ||

***