Showing posts with label ಪಾಲಿಸೆಮ್ಮನು ತ್ರಿಜಗ ಪಾಲಿಸುವನೆ ಎಲ್ಲ ಸುಖವನಿತ್ತು narahari P. Show all posts
Showing posts with label ಪಾಲಿಸೆಮ್ಮನು ತ್ರಿಜಗ ಪಾಲಿಸುವನೆ ಎಲ್ಲ ಸುಖವನಿತ್ತು narahari P. Show all posts

Thursday, 5 August 2021

ಪಾಲಿಸೆಮ್ಮನು ತ್ರಿಜಗ ಪಾಲಿಸುವನೆ ಎಲ್ಲ ಸುಖವನಿತ್ತು ankita narahari P

 ..

kruti by pradyumna teertha ಪ್ರದ್ಯುಮ್ನತೀರ್ಥರು


ಪಾಲಿಸೆಮ್ಮನು ತ್ರಿಜಗ ಪಾಲಿಸುವನೆ ಎಲ್ಲ ಸುಖವನಿತ್ತು ಉದಧಿ

ಆಲಯ ಶರಣ್ಯ ವಿಟ್ಠಲ ಪ


ಹೃದಯಕಮಲ ಮಧ್ಯದಲಿ ಮುದದಿ ಖಗವನೇರಿ ಚರಿಪ

ಯದುಕುಲಾಬ್ಧಿ ಜಾತ ಚಂದ್ರ ವಿಧಿಶಿವಾದಿ ಉಡುಗಣಾರ್ಚಿತ 1


ದಿಟ್ಟಭಕ್ತ ಕೊಟ್ಟ ಇಟ್ಟಗೀ ಮೆಟ್ಟಿನಿಂತಿ ಸಿಟ್ಟು ಇಲ್ಲದೆ

ಹೊಟ್ಟೆ ಮನೆಯ ಮಾಡಿಕೊಟ್ಟಿ ಕೆಟ್ಟಮಾತು ನುಡಿದ ಚೈದ್ಯಗೆ 2


ಕರಗಳನ್ನೆ ಕಟಿಯಲಿಟ್ಟು ಶರಣುಬಂದ ಭಕ್ತಗೆ ಭವ

ಪರಿಮಿತಿಯ ತೋರಿ ನಿರುತ ಪೊರೆಯುವಂಥ ಕರುಣನಿಧಿಯೇ 3

ಪುಂಡರೀಕ ವರದನೆಂದು ಹಿಂಡುಭಕ್ತರು ಪೊಗಳುತಿಹರೊ

ಅಂಡಜಧ್ವಜ ನಿನ್ನಪಾದ ಪುಂಡರೀಕ ತೋರಿಸಿನ್ನು 4


ಶ್ರೀ ನರಹರಿಯೆ ನಿನ್ನ ಗಾನ ಮಾಡಲೆಷ್ಟು ಸಾಮ

ಗಾನಕೆ ನಿಲುಕದ ಮಹಿಮ ಜ್ಞಾನ ಭಕ್ತಿ ಇತ್ತು ಬೇಗ 5

***