..by ಗುರುಪ್ರಾಣೇಶ ವಿಠಲ
ರಾಗ - : ತಾಳ -
ದಯಾನಿಧೆ ದಯ ಮಾಡಬೇಕು l
ದಯ ಮಾಡಬೇಕು ಎನ್ನಯ ದೋಷಾವೆಣಿಸದೆ l
ಹಯಮುಖ ಲೋಕಾತ್ರಯವ್ಯಾಪ್ತ ಪರಮಾಪ್ತ ll ಪ ll
ನಿನ್ನ ನಂಬಿದ ಭಕುತರನ್ನ ಚೆನ್ನಾಗಿ ಕಾಯ್ದಾ l
ಘನ್ನಾ ಕೀರುತಿ ಕೇಳಿ ಮನ್ನಾದಿ ನಮಿಸುವೆ l
ಬನ್ನ ಬಡಿಸದೆ ಸಂಪನ್ನ ಗುಣಾರ್ಣವ ll ೧ ll
ಮಾನಿ ಮಾನದನೇ ದ್ರೌಪದಿ ಅಭಿಮಾನ ರಕ್ಷಕನೇ l
ಭಾನುಜನಕ ಮುಖ್ಯಪ್ರಾಣ ವಂದಿತಾಂಘ್ರಿ l
ನೀನೊಲಿಯದಿರೆ ಸುಜ್ಞಾನ ಮಾರ್ಗವ ಕಾಣೆ ll ೨ ll
ಹರಿಕೋಟಿ ತೇಜಾ ಕಾಮಿತ ಕಲ್ಪತರು ಮಹರಾಜಾ l
ಸುರನದಿಜನಕ ಅಸುರ ಶೀಕ್ಷ ಕಮಲಾಕ್ಷ l
ಕರುಣಿ ಕಪಿಲ ವ್ಯಾಸಾ ಗುರುಪ್ರಾಣೇಶವಿಟ್ಠಲಾ ll ೩ ll
***
ದಯಾನಿಧೆ ದಯ ಮಾಡಬೇಕು ದಯ ಮಾಡಬೇಕು ಎನ್ನಯ ದೋಷಾವೆಣಿಸದೆ |ಹಯಮುಖ ಲೋಕಾತ್ರಯ ವ್ಯಾಪ್ತ ಪರಮಾಪ್ತ ಪ
ನಿನ್ನ ನಂಬಿದ ಭುಕುತರನ್ನ ಚೆನ್ನಾಗಿ ಕಾಯ್ದಾ |ಘನ್ನಾ ಕೀರುತಿ ಕೇಳಿ ಮನ್ನಾದಿ ನಮಿಸುವೆ ಬನ್ನಾ ಬಡಿಸದೆ ಸಂಪನ್ನ ಗುಣಾರ್ಣವ 1
ಮಾನಿ ಮಾನದನೇ ದ್ರೌಪದಿ ಅಭಿಮಾನ ರಕ್ಷಕನೆ |ಭಾನು ಜನಕ ಮುಖ್ಯಪ್ರಾಣ ವಂದಿತಾಂಘ್ರಿ |ನೀನೊಲಿಯದಿರೆ ಸುe್ಞÁನ ಮಾರ್ಗವ ಕಾಣೆ 2
ಹರಿಕೋಟಿ ತೇಜಾ ಕಾಮಿತ ಕಲ್ಪಿತರು ಮಹರಾಜಾ |ಸುರ ನದಿ ಜನಕ ಅಸುರ ಶೀಕ್ಷಾ ಕಮಲಾಕ್ಷ |ಕರುಣಿ ಕಪಿಲ ವ್ಯಾಸಾ ಗುರು ಪ್ರಾಣೇಶ ವಿಠಲಾ 3
***