..
kruti by Srida Vittala Dasaru Karjagi Dasappa
ಮುಟ್ಟಿಗಿಟ್ಟಿ ನೀ ನಮ್ಮ ಎಲೊ ಎಲೊ ಮುರಾರಿ
ನೀ ನಮ್ಮ ಛೇಛುಮ್ಮ [?] ಎಲೊ ಎಲೊ ಪ
ಮಡಿಯನುಟ್ಟು ಮೈತೊಳೆದು ಬಂದಿಹೆವೊ
ಕೊಡಬ್ಯಾಡೆಂಜಲವ ನೀ ಬಹು ತುಂಟಾ 1
ನಿಜ ಪತಿವ್ರತೆಯರು ನಾವಲ್ಲವೇನೂ
ವ್ರಜವನಿತಾಜನ ಜಾರ ನೀ ಬಲು ಚೋರ 2
ಸೋದರತ್ತೆ ಮಗ ನೀ ನಮಗಲ್ಲ
ಶ್ರೀದವಿಠಲ ಬಿಡು ಹಾದಿ ಸುಮ್ಮನೆ ಹೋದೀ 3
***