Showing posts with label ಪಾಲಿಸೆನಗೀ ಜ್ಞಾನ ಪಾಲಸಾಗರಶಾಯಿ ಶ್ರೀ ಲೋಲ ನೀ ನಿತ್ಯದಿ gopalakrishna vittala. Show all posts
Showing posts with label ಪಾಲಿಸೆನಗೀ ಜ್ಞಾನ ಪಾಲಸಾಗರಶಾಯಿ ಶ್ರೀ ಲೋಲ ನೀ ನಿತ್ಯದಿ gopalakrishna vittala. Show all posts

Monday 2 August 2021

ಪಾಲಿಸೆನಗೀ ಜ್ಞಾನ ಪಾಲಸಾಗರಶಾಯಿ ಶ್ರೀ ಲೋಲ ನೀ ನಿತ್ಯದಿ ankita gopalakrishna vittala

ಪಾಲಿಸೆನಗೀ ಜ್ಞಾನ ಪಾಲಸಾಗರಶಾಯಿ

ಶ್ರೀ ಲೋಲ ನೀ ನಿತ್ಯದಿ ಪ.


ಶೀಲಗುಣ ನಿನ್ನ ಏನು ಬೇಡುವುದಿಲ್ಲೊ

ಕಾಲರೂಪನೆ ನಿನ್ನನು | ಇನ್ನು ಅ.ಪ.


ಒಂದು ಅಸ್ವತಂತ್ರ ಒಂದು ಸರ್ವಸ್ವತಂತ್ರ

ಒಂದು ಮನೆಯೊಳಗೆ ಇದ್ದು

ಒಂದೆರಡು ಲೋಕಕ್ಕೆ ಒಂದೆ ದೈವನು ಎನಿಸಿ

ಒಂದೊಂದರಲಿ ಇರುವ

ಒಂದು ಅಪೇಕ್ಷಿಸದೆ ಒಂದೆರಡು ಗುಣದಿಂದ

ಒಂದೆರಡು ಮಾಳ್ಪ ಜಗವ

ಇಂದಿರೇಶನೆ ನಿನ್ನ ಈ ವಿಧದ ವ್ಯಾಪಾರ

ಒಂದೊಂದು ಮನಕೆ ತೋರೋ | ಸ್ವಾಮಿ 1

ಎರಡು ಮಾರ್ಗಗಳಿಹವು ಎರಡು ಕರ್ಮಗಳಿಂದ

ಎರಡು ವಿಧ ಸಮ ತಿಳಿದರೆ

ಎರಡು ರೂಪಗಳನು ಒಂದಾಗಿ ಭಾವಿಸುತ

ಎರಡೊಂದು ಜೀವ ತಿಳಿದು

ಎರಡು ಫಲ ಅನುಭವಿಸಿ ಎರಡು ಹರಿಗರ್ಪಿಸುತ

ಎರಡು ವಿಧ ಕರ್ತನೆಂದು

ಎರಡು ಎಪ್ಪತ್ತು ಸಹಸ್ರನಾಡಿಗಳಲ್ಲಿ

ಎರಡು ರೂಪದಲಿರುವ ಪೊರೆವ 2

ಮೂರು ಅವಸ್ಥೆಯಲಿ ಮೂರು ತಾಪವ ಸಹಿಸಿ

ಮೂರು ಮಾರ್ಗದಲಿ ನಡೆದು

ಮೂರೆಂಟು ಇಂದ್ರಿಯವ ಮೂಲರೂಪದಿ ಲಯಸಿ

ಮೂರಾರು ವಿಧ ಭಕ್ತಿಯಲಿ

ಮೂರೈದು ನುಗ್ಗೊತ್ತಿ ಮೂರು ಮೂರು ಅರಿಯ

ಮೂರು ಶುದ್ಧಿಯಲಿ ಗೆದ್ದು

ಮೂರಾರು ಎರಡೊಂದು ಖೋಡಿ ಮತಗಳ ಮುರಿಸಿ

ಮಾರುತಿಯ ಮತದಿ ನೆಲಸಿ | ತಿಳಿಸಿ 3

ವಿೂನ ಕೂರ್ಮನೆ ವರಹ ಶ್ರೀ ನಾರಸಿಂಹನೆ

ದಾನಯಾಚಕ ಭಾರ್ಗವ

ವಾನರರಿಗೊಲಿದನೆ ವೇಣುಹಸ್ತರೂಪಿ

ಮಾನವಿಲ್ಲದ ಕಲ್ಕಿಯೆ

ಶ್ರೀನಿವಾಸನೆ ನಿನ್ನ ನಾನಾವಿಧ ರೂಪಗಳು

ನಾನು ವರ್ಣಿಸಲು ಅಳವೆ

ಮಾನಾಭಿಮಾನದೊಡೆಯನೆ ಕೃಷ್ಣ ಕೈಪಿಡಿಯೊ

ಭಾನುಪ್ರಕಾಶ ಹರಿಯೆ | ಸಿರಿಯೆ 4

ಶಿರದಲ್ಲಿ ಕಿರೀಟ ಫಣೆಯಲ್ಲಿ ತಿಲುಕವು

ಮೆರೆವ ಕುಂಡಲದ ಕದಪು

ಕಿರುನಗೆಯ ಪಲ್ಗಳು ಕೊರಳಲ್ಲಿ ಹಾರಗಳು

ಕರದಲ್ಲಿ ಆಯುಧಗಳು

ಜರಿಯ ಪೀತಾಂಬರವು ಸಿರಿ ಭೂಮಿ ಎಡಬಲದಿ

ಸುರನದಿಯ ಪೆತ್ತಪಾದ

ಸಿರಿರಮಣ ಗೋಪಾಲಕೃಷ್ಣವಿಠ್ಠಲ ಎನಗೆ

ಪರಿ ಪರಿಯ ರೂಪ ತೋರೊ ಸ್ವಾಮಿ 5

****